ಟೋಕಿಯೊ ಪ್ಯಾರಾಲಿಂಪಿಕ್ಸ್ನ ಸಮಾರೋಪ ಸಮಾರಂಭದಲ್ಲಿ ಶೂಟರ್ ಅವನಿ ಲೇಖಾರಾ ದೇಶದ ಧ್ವಜಧಾರಿಯಾಗಿ ಭಾಗಿಯಾಗಲಿದ್ದಾರೆ.
19 ವರ್ಷದ ಲೇಖಾರಾ ಸೋಮವಾರ ನಡೆದ ಆರ್ -2 ಮಹಿಳಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಹೆಚ್ 1 ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.
ಸಮಾರೋಪ ಸಮಾರಂಭದಲ್ಲಿ ಅವನಿ ಧ್ವಜಧಾರಿಯಾಗಿರುತ್ತಾರೆ. ಭಾರತೀಯ ತಂಡದಿಂದ 11 ಮಂದಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ(ಪಿಸಿಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2012 ರಲ್ಲಿ ಕಾರು ಅಪಘಾತದ ನಂತರ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದ ಲೇಖಾರಾ, ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಬಹು ಪದಕಗಳನ್ನು ಗೆದ್ದ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲೇಖಾರಾ ಅವರಿಗಿಂತ ಮೊದಲು ಜೋಗಿಂದರ್ ಸಿಂಗ್ ಸೋಧಿ ಅವರು 1984 ರ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು.
ಆಗಸ್ಟ್ 24 ರಂದು ನಡೆದ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಶಾಟ್-ಪುಟ್ ಟೆಕ್ ಚಂದ್ ಭಾರತದ ಧ್ವಜಧಾರಿ ಆಗಿದ್ದರು.