ಸೀಮಿತ ಓವರ್‌ಗಳ ಕ್ರಿಕೆಟ್‌ನ ಆವಿಷ್ಕಾರಗಳಲ್ಲಿ ಒಂದಾಗಿರುವ ಸ್ವಿಚ್ ಹಿಟ್ ಶಾಟ್‌ಗಳು ನೋಡಲು ಬಲೇ ರೋಮಾಂಚಕವಾಗಿರುತ್ತವೆ. ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ದಶಕದ ಹಿಂದೆ ಮೊದಲ ಬಾರಿಗೆ ಈ ಶಾಟ್ ಪ್ರಯೋಗ ಮಾಡಿದಾಗ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಯಾಗಿತ್ತು.
ಇದೀಗ ಆಸ್ಟ್ರೇಲಿಯಾದ ಗ್ಲೆಸ್ ಮ್ಯಾಕ್ಸ್‌ವೆಲ್ ಸ್ವಿಚ್ ಹಿಟ್ ಶಾಟ್‌ನ ಮಾಸ್ಟರ್ ಆಗಿದ್ದಾರೆ. ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅರ್ಧಶತಕ ಸಿಡಿಸಿ ಮಿಂಚಿದ ಮ್ಯಾಕ್ಸ್‌ವೆಲ್, ಪಂದ್ಯದ ವೇಳೆ ಸ್ವಿಚ್ ಹಿಟ್ ಮಾಡಿ ಬಾರಿಸಿದ ಒಂದು ಸಿಕ್ಸ್ ನೋಡುಗರ ಕಣ್ಣಲ್ಲಿ ಕಟ್ಟಿದಂತೆ ಇದೆ.
ಆಸ್ಟ್ರೇಲಿಯಾದ ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಕುಲ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಸ್ವಿಚ್ ಹಿಟ್ ಮಾಡಿದ ಮ್ಯಾಕ್ಸ್‌ವೆಲ್, ಭರ್ಜರಿ ಸಿಕ್ಸರ್ ಗಿಟ್ಟಿಸಿದ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ವಿಟರ್ ಹ್ಯಾಂಡನಲ್ಲಿ ಶೇರ್ ಮಾಡಿಕೊಂಡಿದ್ದು, “ಈ ಶಾಟ್‌ಅನ್ನು ವಿವರಿಸಲು ನಮಗೆ ಮಾತು ಬರುತ್ತಿಲ್ಲ. ಮ್ಯಾಕ್ಸಿರ ಈ ಶಾಟನ್ನು ಒಂದು ಪದದಲ್ಲಿ ವರ್ಣಿಸಿ” ಎಂದು ಹೇಳಿದೆ.
https://twitter.com/Colgo/status/1334088332293226501?ref_src=twsrc%5Etfw%7Ctwcamp%5Etweetembed%7Ctwterm%5E1334088332293226501%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fglenn-maxwells-ridiculous-reverse-sweep-six-against-india-leaves-everyone-speechless-3138170.html
https://twitter.com/callumbrownie/status/1334101812333436929?ref_src=twsrc%5Etfw%7Ctwcamp%5Etweetembed%7Ctwterm%5E1334101812333436929%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fglenn-maxwells-ridiculous-reverse-sweep-six-against-india-leaves-everyone-speechless-3138170.html