ಮೆಲ್ಬೋರ್ನ್ ನಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಜಾರಿಬಿದ್ದು, ಕಾಲು ಮುರಿದುಕೊಂಡಿದ್ದಾರೆ.
ಇದರೊಂದಿಗೆ ಆಸ್ಟ್ರೇಲಿಯಾ ತಂಡ ಮತ್ತೊಂದು ಗಾಯದ ಹಿನ್ನಡೆ ಅನುಭವಿಸಿದೆ. ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ ವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ODI ಸರಣಿಯಿಂದ ಅವರು ಹೊರಗುಳಿದಿದ್ದಾರೆ.
ಗ್ಲೆನ್ ಉತ್ತಮ ಉತ್ಸಾಹದಲ್ಲಿದ್ದಾರೆ, ಆದರೆ, ಇದೇ ವೇಳೆ ದುರದೃಷ್ಟಕರ ಘಟನೆ ನಡೆದಿದೆ. ಅವರ ಚೇತರಿಕೆಗೆ ಹಾರೈಸುತ್ತೇವೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.
ಆಸ್ಟ್ರೇಲಿಯದ ವೇಗಿ ಸೀನ್ ಅಬಾಟ್ ಅವರನ್ನು ಏಕದಿನ ಸರಣಿಗೆ ಮ್ಯಾಕ್ಸ್ ವೆಲ್ ಬದಲಿಗೆ ಘೋಷಿಸಲಾಗಿದೆ. T20 ವಿಶ್ವಕಪ್‌ಗೆ ಮುನ್ನ ಆರನ್ ಫಿಂಚ್ ODIಗಳಿಂದ ನಿವೃತ್ತಿ ಘೋಷಿಸಿದ ನಂತರ ಪ್ಯಾಟ್ ಕಮ್ಮಿನ್ಸ್ ವೈಟ್-ಬಾಲ್ ನಾಯಕನಾಗಿ ಆಸ್ಟ್ರೇಲಿಯಾ ತಂಡ ಮುನ್ನಡೆಸಲಿದ್ದಾರೆ.