ಇಂಗ್ಲೆಂಡ್ ಮಾಜಿ ಆಟಗಾರ ಹಾಗೂ ನಿರೂಪಕ ರಾಬಿನ್ ಜಾಕ್ಮ್ಯಾನ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಮೃತ ರಾಬಿನ್ ಪತ್ನಿ ಯವೊನೆ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ.
ಶಿಮ್ಲಾದಲ್ಲಿ ಜನಿಸಿದ್ದ ಜಾಕ್ಮನ್ 1974 ಹಾಗೂ 1983ರ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕದಲ್ಲಿ ಇಂಗ್ಲೆಂಡ್ ಪರ ಆಡಿ 33 ವಿಕೆಟ್ಗಳನ್ನ ಕಬಳಿಸಿದ್ದಾರೆ. 1966ರಿಂದ ಕ್ರಿಕೆಟ್ ಜೀವನಕ್ಕೆ ಪದಾರ್ಪಣೆ ಮಾಡಿದ ಜಾಕ್ಮನ್ ಇಂಗ್ಲೆಂಡ್ ಪರ ನಾಲ್ಕು ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನಾಡಿದ್ದಾರೆ.
75ನೇ ವಯಸ್ಸಿಗೆ ನಿಧನರಾದ ನಿರೂಪಕ ಹಾಗೂ ಮಾಜಿ ಇಂಗ್ಲೆಂಡ್ ಬೌಲರ್ ರಾಬಿನ್ ಜಾಕಮನ್ ನಿಧನ ವಾರ್ತೆ ಕೇಳಿ ಬೇಸರವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ನಿವೃತ್ತಿ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ರಾಬಿನ್ ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದರು. 2012ರಲ್ಲಿ ಜಾಕ್ಮನ್ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.