ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ಸೇವಿಯರ್ ಡೋಹರ್ಟಿ ಕಾರ್ಪೆಂಟರ್ ಆಗಿ ಬದಲಾಗಿದ್ದಾರೆ. ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಅವರು ನಿವೃತ್ತಿಯಾದ 4 ವರ್ಷಗಳ ನಂತರ ತಮ್ಮ ಅಗತ್ಯತೆ ಪೂರೈಸಲು ಬಡಗಿ ಕೆಲಸ ಮಾಡುತ್ತಿದ್ದಾರೆ.
ಕ್ರಿಕೆಟಿಗರೆಂದರೆ ಐಶಾರಾಮಿ ಜೀವನ ನಡೆಸುತ್ತಾರೆ. ಸಾಕಷ್ಟು ಶ್ರೀಮಂತರಾಗಿರುತ್ತಾರೆ ಎನ್ನುವುದಕ್ಕೆ ಅಪವಾದವೆನ್ನುವಂತೆ ಕ್ಸೇವಿಯರ್ ಡೋಹರ್ಟಿ ಜೀವನ ಸಾಗಿದೆ.
2012 ರಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದ ಕ್ಸೇವಿಯರ್ ಡೋಹರ್ಟಿ 2010 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 4 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಅವರು 7 ವಿಕೆಟ್ ಗಳಿಸಿದ್ದಾರೆ. ಅಲ್ಲದೆ 60 ಏಕದಿನ ಪಂದ್ಯಗಳಲ್ಲಿ 55 ಪಡೆದಿದ್ದು, 11 ಟಿ-ಟ್ವೆಂಟಿ ಪಂದ್ಯಗಳಲ್ಲಿ 10 ವಿಕೆಟ್ ಗಳಿಸಿದ್ದಾರೆ.
2015 ರಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಮೈಕಲ್ ಕ್ಲಾರ್ಕ್ ನೇತೃತ್ವದ ತಂಡದಲ್ಲಿದ್ದ ಕ್ಸೇವಿಯರ್ ಡೋಹರ್ಟಿ ಟೂರ್ನಿಯಲ್ಲಿ ಏಕೈಕ ಪಂದ್ಯವಾಡಿದ್ದರೂ ವಿಕೆಟ್ ಗಳಿಸಲು ವಿಫಲರಾಗಿದ್ದರು. ಪಂದ್ಯದಲ್ಲಿ ಅವರು 7 ಓವರ್ ಗಳಲ್ಲಿ ವಿಕೆಟ್ ಪಡೆಯತದೇ 60 ರನ್ ನೀಡಿದ್ದರು. ಈ ಪಂದ್ಯದ ಹಿನ್ನಡೆಯೇ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆ ಪಂದ್ಯವಾಯಿತು.
ನಿವೃತ್ತಿ ನಂತರ ಮುಂದಿನ ಜೀವನದ ಬಗ್ಗೆ 38 ವರ್ಷದ ಕ್ಸೇವಿಯರ್ ಡೋಹರ್ಟಿಗೆ ತಿಳಿದಿರಲಿಲ್ಲ. ಆದರೆ, ಕಾರ್ಪೆಂಟರ್ ಆಗಿ ಹೊಸ ವೃತ್ತಿ ಆರಂಭಿಸಿದ್ದಾರೆ. ಮರಗೆಲಸದ ವೃತ್ತಿಯ ಬಗ್ಗೆ ಅವರು ಸಂತಸದಿಂದ ಮಾತನಾಡಿದ್ದು, ನಿರ್ಣಾಯಕ ಪರಿಸ್ಥಿತಿಯಲ್ಲಿ ತನಗೆ ಸಹಾಯ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.
https://twitter.com/ACA_Players/status/1394558783892844549