ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್‌ಗಿಲ್ ಅಪಹರಣ ಪ್ರಕರಣದಲ್ಲಿ 4 ಜನರನ್ನು ಆಸ್ಟ್ರೇಲಿಯಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಘಟನೆ ನಡೆದಿತ್ತು. ಮ್ಯಾಕ್ ಗಿಲ್ ಅವರನ್ನು ಸಿಡ್ನಿಯ ಮನೆಯಿಂದಲೇ ಅಪಹರಿಸಲಾಗಿತ್ತು. ಅಪಹರಣಕ್ಕೊಳಗಾದ ವ್ಯಕ್ತಿಯನ್ನು 50 ವರ್ಷ ವಯಸ್ಸಿನ ಮೆಕ್‌ಗಿಲ್ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಏಪ್ರಿಲ್ 14 ರಂದು ಗುರುತಿಸಿದ್ದರು.
ಮ್ಯಾಕ್ ಗಿಲ್ ಮನೆಗೆ ಬಂದ ವ್ಯಕ್ತಿಯೊಬ್ಬ ಅವರನ್ನು ಕಾರಿಗೇರಿಸಿದ್ದ. ನಂತರ ಇನ್ನಿಬ್ಬರು ಬಂದು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದರು. ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಬೌಲರ್ ಮ್ಯಾಕ್ ಗಿಲ್ ಅವರನ್ನು ನೈರುತ್ಯ ನಗರಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಸ್ಥಳವನ್ನು ಬದಲಾಯಿಸಲಾಗಿತ್ತು. ಬಿಡುಗಡೆಯಾಗುವ ಮೊದಲು ಮ್ಯಾಕ್ ಗಿಲ್ ಗೆ ಕೊಲೆ ಬೆದರಿಕೆ ಹಾಕಲಾಗಿತ್ತು.
ಮಾಧ್ಯಮ ವರದಿ ಪ್ರಕಾರ, ಮ್ಯಾಕ್ ಗಿಲ್ ಅಪಹರಣದ ಮಾಹಿತಿಯನ್ನು ಏಪ್ರಿಲ್ 20 ರಂದು ಅಧಿಕಾರಿಗಳಿಗೆ ನೀಡಲಾಗಿತ್ತು. ನಂತರ ಪೊಲೀಸರು ಸಿಡ್ನಿಯ ಕೆಲವು ಮನೆಗಳ ಮೇಲೆ ದಾಳಿ ನಡೆಸಿ ನಾಲ್ಕು ಜನರನ್ನು ಬಂಧಿಸಿದ್ದಾರೆ. ಆದರೆ ಬಂಧಿತರ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಮ್ಯಾಕ್ ಗಿಲ್ ಮಾಜಿ ಲೆಗ್ ಸ್ಪಿನ್ ಬೌಲರ್ ಆಗಿದ್ದು, 1988 ಮತ್ತು 2008 ರ ನಡುವೆ ಆಸ್ಟ್ರೇಲಿಯಾ ಪರ 44 ಟೆಸ್ಟ್ ಪಂದ್ಯಗಳಲ್ಲಿ 208 ವಿಕೆಟ್ ಪಡೆದಿದ್ದಾರೆ.