ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಲೇಖಕನನ್ನ ಹೊಗಳೋ ಮೂಲಕ ಮತ್ತೊಮ್ಮೆ ಭಾರತದ ಮೇಲಿರುವ ತಮ್ಮ ಪ್ರೀತಿಯನ್ನ ತೋರಿಸಿದ್ದಾರೆ . ‘
ಭಾರತೀಯ ಲೇಖಕ ಅಮಿತ್ ತ್ರಿಪಾಠಿ ಅವರು ಬರೆದ ಸುಹೇಲ್ ದೇವ್ ಪುಸ್ತಕವನ್ನ ಹಿಡಿದು ತೆಗೆದ ಸೆಲ್ಫಿಯೊಂದನ್ನ ಪೋಸ್ಟ್ ಮಾಡಿದ್ದಾರೆ. ಈಗಷ್ಟೇ ಜಿಮ್ನಿಂದ ವಾಪಸ್ಸಾಗಿದ್ದೆ. ಪೋಸ್ಟ್ನಲ್ಲಿ ನನಗೆ ಏನು ಬಂದಿದೆ ಅಂತಾ ಚೆಕ್ ಮಾಡ್ತಿದ್ದ ನನಗೆ ನನ್ನಿಷ್ಟದ ಲೇಖಕ ಅಮಿತ್ ತ್ರಿಪಾಠಿ ಬರೆದ ಸುಹೇಲ್ ದೇವ್ ಪುಸ್ತಕ ಸಿಕ್ಕಿದೆ. ಓಂ ನಮಃ ಶಿವಾಯ ಅಂತಾ ಕ್ಯಾಪ್ಶನ್ ಕೂಡ ಹಾಕಿದ್ದಾರೆ.
ಸದ್ಯ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಫೀಲ್ಡಿಂಗ್ ವಿಭಾಗದ ಕೋಚ್ ಆಗಿರೋ ರೋಡ್ಸ್ರ ಭಾರತದ ಮೇಲಿನ ಪ್ರೀತಿ ಇಂದು ನಿನ್ನೆಯದಲ್ಲ. 2015ರಲ್ಲಿ ರೋಡ್ಸ್ ದಂಪತಿಗೆ ಜನಿಸಿದ್ದ ಹೆಣ್ಣು ಮಗುವಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದರು. 2016ರಲ್ಲಿ ಕುಟುಂಬ ಸಮೇತ ಭಾರತಕ್ಕೆ ಬಂದಿದ್ದ ಅವರು ತಮ್ಮ ಪುಟ್ಟ ಕಂದಮ್ಮನ ಹೆಸರಲ್ಲಿ ಪೂಜೆ ಕೂಡ ಮಾಡಿಸಿದ್ದರು. ಅಲ್ಲೇ ಮುಂಬೈನ ಸಾಂತಾಕ್ರ್ಯೂಸ್ನಲ್ಲಿರುವ ಪೇಜಾವರ ಮಠಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು.
https://www.instagram.com/p/BE3YiaTH7TF/?utm_source=ig_web_copy_link