ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಸದ್ಯ ಎರಡನೇ ಟೆಸ್ಟ್ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ ಸಮಾಧಾನದಲ್ಲಿದೆ. ಮೆಲ್ಬರ್ನ್ ಟೆಸ್ಟ್ ಗೆಲುವಿನ ಬಳಿಕ ಸಿಡ್ನಿ ಪಂದ್ಯದಲ್ಲೂ ಗೆದ್ದು ಟೂರ್ನಿಯಲ್ಲಿ ಮುನ್ನಡೆ ಸಾಧಿಸುವ ಆಶಯ ಭಾರತದ್ದು.
ಇದೇ ವೇಳೆ, ಮೆಲ್ಬರ್ನ್ ರೆಸ್ಟೋರೆಂಟ್ ಒಂದರಲ್ಲಿ ತಾವು ಕುಳಿತಿದ್ದ ಟೇಬಲ್ ಬಳಿಯೇ ಭಾರತೀಯ ಆಟಗಾರರು ಇದ್ದದ್ದನ್ನು ಗಮನಿಸಿದ ಟೀಂ ಇಂಡಿಯಾ ಫ್ಯಾನ್ ನವಲ್ದೀಪ್ ಸಿಂಗ್, ಆಟಗಾರರ ಬಿಲ್ ಅನ್ನು ತಾವೇ ಪಾವತಿಸಿದ್ದಾರೆ.
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ನವ್ದೀಪ್ ಸೈನಿ ಹಾಗೂ ರಿಶಭ್ ಪಂತ್ ಹೊಸ ವರ್ಷದ ದಿನದಂದು ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದ ನವಲ್ದೀಪ್, 118.69 ಡಾಲರ್ (6683 ರೂ.) ಮೌಲ್ಯದ ಬಿಲ್ ಅನ್ನು ತಾವೇ ಭರಿಸಿದ್ದಾಗಿ ತಿಳಿಸಿದ್ದಾರೆ. ಅದಲ್ಲದೇ, ಟೀಂ ಇಂಡಿಯಾ ಆಟಗಾರರನ್ನು ಇನ್ನಷ್ಟು ಹೊತ್ತು ನೋಡುವುದಕ್ಕಾಗಿಯೇ ತಾವು ಇನ್ನಷ್ಟು ಫುಡ್ ಆರ್ಡರ್ ಮಾಡಿದ್ದಾಗಿ ಈ ಅಭಿಮಾನಿ ತಿಳಿಸಿದ್ದಾರೆ.
ತಮ್ಮ ಬಿಲ್ ಅನ್ನು ಅಭಿಮಾನಿಯೊಬ್ಬರು ಪಾವತಿ ಮಾಡಲು ಬಂದಿರುವುದನ್ನು ತಿಳಿದ ರೋಹಿತ್ ಶರ್ಮಾ, ಆ ಹಣವನ್ನು ವಾಪಸ್ ಪಡೆಯಲು ನವ್ದೀಪ್ಗೆ ಮನವಿ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.