ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಮೊದಲ ದಿನದಾಟದಲ್ಲಿ 90 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ ಅಜೇಯ 127, ಚೇತೇಶ್ವರ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯಾ ರೆಹಾನೆ ಅಜೇಯ 1 ರನ್ ಗಳಿಸಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ರೋಹಿತ್ ಶರ್ಮಾ, ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ದಾಖಲೆ ಜೊತೆಯಾಟವಾಡಿದ್ದಾರೆ. ಈ ಮೈದಾನದಲ್ಲಿ ಭಾರತದ ಪರ ದಾಖಲಾಗಿದ್ದ 69 ವರ್ಷಗಳ ದಾಖಲೆ ಮುರಿದಿದ್ದಾರೆ. 1952 ರಲ್ಲಿ ವಿನೂ ಮಖಡ್ ಮತ್ತು ಪಂಕಜ್ ರಾಯ್ ಅವರು 106 ರನ್ ಜೊತೆಯಾಟವಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದು, 126 ರನ್ ಜೊತೆಯಾಟವಾಡಿದ್ದಾರೆ.
ಮಳೆಯಿಂದಾಗಿ ಮೊದಲ ಟೆಸ್ಟ್ ಗೆಲ್ಲುವ ಅವಕಾಶದಿಂದ ಭಾರತ ವಂಚಿತವಾಗಿತ್ತು. ಎರಡನೆಯ ಹಂತದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಪರವಾಗಿ ರಾಹುಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.