
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂದು ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ.
ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಇಂಗ್ಲೆಂಡ್ ತಂಡ ಇಂದಿನ ಪಂದ್ಯವನ್ನು ಜಯಿಸಿ ಸರಣಿ ವಶಕ್ಕೆ ಪಡೆಯಲು ಕಾರ್ಯ ತಂತ್ರ ರೂಪಿಸಿವೆ. ಮೊದಲ ಪಂದ್ಯದಲ್ಲಿ ಭಾರತ 66 ರನ್ ಗಳ ಅಂತರದಿಂದ ಜಯಗಳಿಸಿದೆ. ಎರಡನೇ ಪಂದ್ಯವನ್ನು ಇಂಗ್ಲೆಂಡ್ 6 ವಿಕೆಟುಗಳ ಅಂತರದಿಂದ ಗೆದ್ದಿತ್ತು.
ಇವತ್ತು ನಿರ್ಣಾಯಕ ಪಂದ್ಯ ನಡೆಯಲಿದೆ. ಸರಣಿ ಗೆಲುವಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕಾರ್ಯತಂತ್ರ ರೂಪಿಸಿದ್ದಾರೆ. ಪುಣೆ ಕ್ರೀಡಾಂಗಣದಲ್ಲಿ ಇಂದು ಕೂಡ ರನ್ ಹೊಳೆ ಹರಿಯಲಿದೆ. ಮಧ್ಯಾಹ್ನ 1.30 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಭಾರೀ ಕುತೂಹಲ ಮೂಡಿಸಿದೆ.