ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 66 ರನ್ ಗಳ ಭರ್ಜರಿ ಜಯಗಳಿಸಿದೆ.
ಪದಾರ್ಪಣೆ ಪಂದ್ಯದಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಪಡೆದಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿದೆ. ರೋಹಿತ್ ಶರ್ಮಾ 28, ಶಿಖರ್ ಧವನ್ 98, ವಿರಾಟ್ ಕೊಹ್ಲಿ 56, ಶ್ರೇಯಸ್ 6, ಕೆ.ಎಲ್. ರಾಹುಲ್ ಅಜೇಯ 62, ಹಾರ್ದಿಕ್ ಪಾಂಡ್ಯ 1, ಕೃಣಾಲ್ ಪಾಂಡ್ಯ ಅಜೇಯ 58 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 3, ಮಾರ್ಕ್ ವುಡ್ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ 42.1 ಓವರ್ ಗಳಲ್ಲಿ 251 ರನ್ ಗಳಿಸಿ 66 ರನ್ ಗಳಿಂದ ಸೋಲು ಕಂಡಿದೆ. ಜಾನಿ ಬೈರ್ ಸ್ಟೋವ್ 94, ಜೇಸನ್ 46, ಮೋಯಿನ್ 30 ರನ್ ಗಳಿಸಿದ್ದಾರೆ. ಭಾರತದ ಪರ ಭುವನೇಶ್ವರ್ ಕುಮಾರ್ 2, ಪ್ರಸಿದ್ಧ್ ಕೃಷ್ಣ 4, ಶಾರ್ದೂಲ್ ಠಾಕೂರ್ 3 ಹಾಗೂ ಕೃಣಾಲ್ ಪಾಂಡ್ಯ 1 ವಿಕೆಟ್ ಗಳಿಸಿದ್ದಾರೆ.