ಬಹುಶಃ ಇವರು ಗಳಿಸಿದ ಖ್ಯಾತಿ ಎಷ್ಟು ಗೊತ್ತಾ ? ಎಂದೇ ಇವರ ಬಗ್ಗೆ ಮಾತಾಡಬೇಕಾಗುತ್ತದೆ. ಇವರ ಹೆಸರುಗಳು ಕೇಳಿದ್ರೆ ಇಡೀ ವಿಶ್ವವೇ ಒಂದು ನಿಮಿಷ ನಿಂತು ನೋಡುತ್ತದೆ. ಅಂದಾಗೆ ನಾವು ಮಾಹಿತಿ ಕೊಡಲು ಹೊರಟಿರುವುದು ನಮ್ಮ ಕ್ರಿಕೆಟರ್ಸ್ ಬಗ್ಗೆ. ಅದರಲ್ಲೂ ಅವರ ವಿದ್ಯಾರ್ಹತೆಯ ಬಗ್ಗೆ.
ರಾಹುಲ್ ದ್ರಾವಿಡ್ ಅವರಿಂದ ಹಿಡಿದು ವಿರಾಟ್ ಕೊಹ್ಲಿ ತನಕ ಅವರು ಓದಿದ್ದು ಎಷ್ಟು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ವಿರಾಟ್ ಕೊಹ್ಲಿ ಓದಿದ್ದು ಪಿಯುಸಿ ತನಕ. ದೆಹಲಿಯ ವಿಶಾಲ್ ಭಾರತಿ ಶಾಲೆಯಲ್ಲಿ. ಇನ್ನು ಕ್ರಿಕೆಟ್ ದೇವರು ಸಚಿನ್ ಓದಿರೋದು ಕೂಡ ಪಿಯುಸಿ. ಮುಂಬೈನ ಶಾರದಾಶ್ರಮ ಶಾಲೆ. ಉಮೇಶ್ ಯಾದವ್ ಓದಿರೋದು ಪಿಯುಸಿ.
ಮಾಜಿ ನಾಯಕ ಎಂ.ಎಸ್. ಧೋನಿ ಕಾಮಸ್೯ ಪದವೀಧರ, ಮುಂಬೈನ ಸೆಂಟ್ ಕ್ಸೇವಿಯರ್ ಕಾಲೇಜ್ ಡ್ರಾಪೌಟ್. ಸೌರವ್ ಗಂಗೂಲಿ, ಕಾಮಸ್೯ ಪದವೀಧರ. ಕೋಲ್ಕತ್ತದ ನ ಸೇಂಟ್ ಜೇವ್ಹಿಯರ್ಸ್ ಕಾಲೇಜಿನ ವಿದ್ಯಾರ್ಥಿ. ಬಳಿಕ ಗೌರವ ಡಾಕ್ಟರೇಟ್ ಪಡೆದ್ರು.
ರೋಹಿತ್ ಶರ್ಮಾ- ಪಿಯುಸಿ, ರವಿಚಂದ್ರನ್ ಅಶ್ವಿನ್- ಬಿಇ, ರಾಹುಲ್ ದ್ರಾವಿಡ್- ಸ್ನಾತಕೋತ್ತರ ಪದವೀಧರ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್, ಅನಿಲ್ ಕುಂಬ್ಳೆ- ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಬಿ.ಇ., ಶಿಖರ್ ಧವನ್- ಪಿಯುಸಿ, ವೀರೇಂದ್ರ ಸೆಹವಾಗ್- ಪದವೀಧರ, ಹಾರ್ದಿಕ್ ಪಾಂಡ್ಯ- 9ನೇ ತರಗತಿ, ಕೆ.ಎಲ್. ರಾಹುಲ್- ಕಾಮರ್ಸ್ ಪದವೀಧರ, ವಿವಿಎಸ್ ಲಕ್ಷ್ಮಣ್- ಎಂಬಿಬಿಎಸ್ ಡ್ರಾಪೌಟ್, ಮನೀಶ್ ಪಾಂಡ್ಯಾ- ಪದವೀಧರ, ಜಾವಗಲ್ ಶ್ರೀನಾಥ್- ಎಂಜಿನೀಯರಿಂಗ್ ಪದವೀಧರ, ರಿಷಬ್ ಪಂತ್- ಬಿಎ, ಯುವರಾಜ್ ಸಿಂಗ್- ಪಿಯುಸಿ ಡ್ರಾಪೌಟ್, ಗೌತಮ್ ಗಂಭೀರ್- ಪದವೀಧರ.