ಡ್ವೇನ್ ಜಾನ್ಸನ್ ಹಾಗೂ ಆತನ ಮುದ್ದಿನ ಮಗಳು ಟಿಯಾ ನಡುವಿನ ಅಪ್ಪ-ಮಗಳ ಪ್ರೀತಿಯ ಕ್ಷಣದ ಫೋಟೋಗಳು ನೆಟ್ಟಿಗರ ಫೇವರಿಟ್ಗಳಲ್ಲಿ ಒಂದು ವಿಷಯ.
ಇನ್ಸ್ಟಾಗ್ರಾಂನಲ್ಲಿ ಎರಡು ಹೊಸ ಚಿತ್ರಗಳನ್ನು ಪೋಸ್ಟ್ ಮಾಡಿರುವ ಜಾನ್ಸನ್, ತಮ್ಮ ಒರಟಾದ ಕರಗಳ ಬಗ್ಗೆ ಮುದ್ದಿನ ಮಗಳು ಕೇಳಿದ ಪ್ರಶ್ನೆಗೆ ತಮ್ಮ ಪ್ರತಿಕ್ರಿಯೆ ಬಗ್ಗೆ ಹೇಳಿಕೊಂಡಿದ್ದಾರೆ. “250 ಮಿಲಿಯನ್ ವರ್ಷಗಳ ಹಿಂದೆ ಪಪ್ಪ ಡೈನಾಸೋರ್ ಆಗಿದ್ದರು” ಎಂದು ಟಿಯಾಗೆ ಹೇಳಿದ್ದಾಗಿ ಜಾನ್ಸನ್ ಹೇಳಿದ್ದಾರೆ.
ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಾದ ನೋರಾ
ಎರಡನೇ ಚಿತ್ರದಲ್ಲಿ ಅಪ್ಪನ ಮಾತಿಗೆ ಮಗಳ ಪ್ರತಿಕ್ರಿಯೆ ನೋಡಬಹುದಾಗಿದೆ. “ಡ್ಯಾಡಿ ವಾಸ್ತವದಲ್ಲಿ 250 ಮಿಲಿಯನ್ ವರ್ಷ ವಯಸ್ಸಿನ ಡೈನೋಸಾರ್” ಎಂದು ತಾನು ಹೇಳಿದಾಗ ಮಗಳ ಮುಖದಲ್ಲಿ ಬಂದ ಪ್ರತಿಕ್ರಿಯೆ ಇದಾಗಿದ ಎಂದು ಜಾನ್ಸನ್ ಪೋಸ್ಟ್ನ ಕ್ಯಾಪ್ಷನ್ನಲ್ಲಿ ಹೇಳಿಕೊಂಡಿದ್ದಾರೆ.
https://www.instagram.com/p/CLrxkf1lo2W/?utm_source=ig_web_copy_link