
ಚೀನಾ ಕಂಪನಿ ವಿವೊ ಜೊತೆಗಿನ ಒಪ್ಪಂದ ಮುಗಿದ ನಂತರ ಐಪಿಎಲ್ 2020 ರ ಶೀರ್ಷಿಕೆ ಪ್ರಾಯೋಜಕತ್ವ ಯಾರ ಪಾಲಾಗುತ್ತೆ ಎಂಬ ಪ್ರಶ್ನೆ ಎದ್ದಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಐಪಿಎಲ್ 13 ನೇ ಋತುವಿಗೆ ಶೀರ್ಷಿಕೆ ಪ್ರಾಯೋಜಕತ್ವ ಡ್ರೀಮ್ ಇಲೆವೆನ್ ಪಾಲಾಗಿದೆ.
ಟಾಟಾ ಗ್ರೂಪ್ ಸೇರಿದಂತೆ ಈ ಓಟದಲ್ಲಿ ದೊಡ್ಡ ಕಂಪನಿಗಳಿದ್ದವು. ಬಾಬಾ ರಾಮ್ ದೇವ್ ಪತಂಜಲಿ ಕಂಪನಿ ಕೂಡ ಶೀರ್ಷಿಕೆ ಪಾಯೋಜಕತ್ವಕ್ಕೆ ಬಿಡ್ ಮಾಡುವುದಾಗಿ ಹೇಳಿತ್ತು. ಈಗ ಡ್ರೀಮ್ ಇಲೆವೆನ್ 222 ಕೋಟಿ ರೂಪಾಯಿಗೆ ಪಾಯೋಜಕತ್ವದ ಪಡೆದುಕೊಂಡಿದೆ.
ಡ್ರೀಮ್ 11 ಐಪಿಎಲ್ ಶೀರ್ಷಿಕೆ ಪ್ರಯೋಜಕತ್ವ ಪಡೆದಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.