ಬೊಲಿವಿಯಾದಲ್ಲಿ ನಡೆಯುತ್ತಿದ್ದ ವೃತ್ತಿಪರ ಫುಟ್ಬಾಲ್ ಪಂದ್ಯವೊಂದರ ವೇಳೆ ಮೈದಾನಕ್ಕೆ ನಾಯಿಯೊಂದು ನುಗ್ಗಿದ ಕಾರಣ ಆಟವನ್ನು ಕೆಲ ಕ್ಷಣಗಳ ಮಟ್ಟಿಗೆ ನಿಲ್ಲಿಸಬೇಕಾಗಿ ಬಂದಿತ್ತು.
ಇಲ್ಲಿನ ಪೊಟೋಸಿಯಲ್ಲಿ ಡಿಸೆಂಬರ್ 24ರಂದು ನಡೆದ ’ದಿ ಸ್ಟ್ರಾಂಗೆಸ್ಟ್’ ಹಾಗೂ ’ನೇಷನಲ್ ಪೊಟೋಸಿ’ ಕ್ಲಬ್ ತಂಡಗಳ ನಡುವಿನ ಪಂದ್ಯದ ವೇಳೆ ಹೀಗೆ ಆಗಿದೆ.
ತನ್ನ ಬಾಯಿಯಲ್ಲಿ ಫುಟ್ಬಾಲ್ ಬೂಟ್ ಒಂದನ್ನು ಕಚ್ಚಿಕೊಂಡು ಬಂದ ನಾಯಿ ಅಲ್ಲಿಂದ ಹೊರಗೆ ಹೋಗಲು ನಿರಾಕರಿಸಿದೆ. ಕೊನೆಗೆ ಆಟಗಾರರೊಬ್ಬರು ಆ ನಾಯಿಯನ್ನು ಎತ್ತಿಕೊಂಡು ಆಡುವ ಅಂಗಳದಿಂದ ಹೊರಗೆ ಕರೆದೊಯ್ದ ಬಳಿಕ ಆಟ ಮುಂದುವರೆದಿದೆ.
ದಿ ಸ್ಟ್ರಾಂಗರ್ ತಂಡದ ಆಟಗಾರ ರೌಲ್ ಕ್ಯಾಸ್ಟ್ರೋ ನಾಯಿಯನ್ನು ದತ್ತು ಪಡೆಯುವುದಾಗಿ ಪಂದ್ಯದ ಬಳಿಕ ಘೋಷಿಸಿದ್ದಾರೆ.