ಲಾರ್ಡ್ಸ್: ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಎಡಗೈ ಆರಂಭಿಕ ಆಟಗಾರ ಡೆವೊನ್ ಕಾನ್ ವೇ ಭರ್ಜರಿ ಶತಕ ಸಿಡಿಸಿದ್ದಾರೆ.
240 ಎಸೆತಗಳಲ್ಲಿ 16 ಬೌಂಡರಿ ಸಹಿತ ಅಜೇಯ 136 ರನ್ ಗಳಿಸಿದ 29 ವರ್ಷದ ಕಾನ್ ವೇ 1996 ರಲ್ಲಿ ಟೀಂ ಇಂಡಿಯಾದ ಸೌರವ್ ಗಂಗೂಲಿ ನಿರ್ಮಿಸಿದ್ದ ದಾಖಲೆ ಹಿಂದಿಕ್ಕಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಸೌರವ್ ಗಂಗೂಲಿ(131 ರನ್) ಅವರ 25 ವರ್ಷಗಳ ದಾಖಲೆಯನ್ನು ಡೆವೊನ್ ಕಾನ್ ವೇಹಿಂದಿಕ್ಕಿದ್ದಾರೆ.
ಮೊದಲ ದಿನ ನ್ಯೂಜಿಲೆಂಡ್ 86 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದೆ. ಕಾನ್ ವೇ ಅಜೇಯ 136, ಲೋಥಮ್ 23, ನಿಕೋಲ್ಸ್ ಅಜೇಯ 46 ರನ್ ಗಳಿಸಿದ್ದಾರೆ.