alex Certify BIG NEWS: Instagram ನಲ್ಲಿ ಹೊಸ ದಾಖಲೆ; 400 ಮಿಲಿಯನ್ ಫಾಲೋಯರ್ಸ್ ತಲುಪಿದ ಮೊದಲ ವ್ಯಕ್ತಿ ಕ್ರಿಸ್ಟಿಯಾನೋ ರೊನಾಲ್ಡೊ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: Instagram ನಲ್ಲಿ ಹೊಸ ದಾಖಲೆ; 400 ಮಿಲಿಯನ್ ಫಾಲೋಯರ್ಸ್ ತಲುಪಿದ ಮೊದಲ ವ್ಯಕ್ತಿ ಕ್ರಿಸ್ಟಿಯಾನೋ ರೊನಾಲ್ಡೊ

ಕ್ರಿಸ್ಟಿಯಾನೋ ರೊನಾಲ್ಡೊ ಫುಟ್‌ ಬಾಲ್ ಪಿಚ್‌ ನಲ್ಲಿ ದಾಖಲೆಗಳನ್ನು ಮುರಿಯುವುದು ಸಾಮಾನ್ಯ. ಈಗ ಅವರು ತಮ್ಮ ಹಿರಿಮೆಗೆ ಮತ್ತೊಂದು ಗರಿ ಮುಡಿಗೇರಿಸಿಕೊಂಡಿದ್ದಾರೆ. ಮತ್ತೊಂದು ಮೈಲಿಗಲ್ಲು ಸೇರಿರುವ ಕ್ರಿಸ್ಟಿಯಾನೋ ರೊನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್ ಸೂಪರ್‌ಸ್ಟಾರ್ 400 ಮಿಲಿಯನ್ ಇನ್‌ ಸ್ಟಾಗ್ರಾಮ್ ಫಾಲೋಯರ್ಸ್ ಗಳನ್ನು ತಲುಪಿದ ಮೊದಲ ವ್ಯಕ್ತಿಯಾಗಿದ್ದಾರೆ.

ತನ್ನ ಪತ್ನಿ ಜಾರ್ಜಿನಾ ರೊಡ್ರಿಗಸ್‌ನೊಂದಿಗೆ ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿದ ಕೇವಲ ಒಂದು ದಿನದ ನಂತರ ಕ್ರಿಸ್ಟಿಯಾನೋ ರೊನಾಲ್ಡೊ 400 ಮಿಲಿಯನ್ ಫಾಲೋಯರ್ಸ್ ಗಳನ್ನು ದಾಟಿದ್ದಾರೆ. ರೊನಾಲ್ಡೊ ಅವರ ಪೋಸ್ಟ್‌ ಗೆ ಜೊತೆಗೂಡಿದ ಶೀರ್ಷಿಕೆಯಂತೆ, ‘ಜೀವನವು ರೋಲರ್ ಕೋಸ್ಟರ್ ಆಗಿದೆ. ಕಠಿಣ ಪರಿಶ್ರಮ, ಹೆಚ್ಚಿನ ವೇಗ, ತುರ್ತು ಗುರಿಗಳು, ಬೇಡಿಕೆಯ ನಿರೀಕ್ಷೆಗಳು … ಆದರೆ ಕೊನೆಯಲ್ಲಿ, ಇದು ಕುಟುಂಬ, ಪ್ರೀತಿ, ಪ್ರಾಮಾಣಿಕತೆ, ಸ್ನೇಹ, ಮೌಲ್ಯಗಳು ಎಲ್ಲವನ್ನೂ ಮೌಲ್ಯಯುತವಾಗಿಸುತ್ತದೆ. ಎಲ್ಲಾ ಸಂದೇಶಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇನ್‌ ಸ್ಟಾಗ್ರಾಮ್‌ ನಲ್ಲಿ ಹೆಚ್ಚು ಹಿಂಬಾಲಿಸುವ ವ್ಯಕ್ತಿಯಾಗಿ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ. ಕೈಲಿ ಜೆನ್ನರ್ 308 ಮಿಲಿಯನ್‌ ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಫುಟ್‌ ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 306 ಮಿಲಿಯನ್ ಅನುಯಾಯಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

37 ನೇ ವಯಸ್ಸಿನಲ್ಲಿ ರೊನಾಲ್ಡೊ ಆಟ ನಿಲ್ಲಿಸುವ ಯಾವುದೇ ಲಕ್ಷಣಗಳನ್ನು ತೋರುತ್ತಿಲ್ಲ. ಹಿಂದಿನ ಸಂದರ್ಶನದಲ್ಲಿ ಅವರು, ಆನುವಂಶಿಕವಾಗಿ ನನಗೆ 30 ವರ್ಷ ವಯಸ್ಸಾಗಿದೆ ಎಂದು ಭಾವಿಸುತ್ತೇನೆ. ನಾನು ನನ್ನ ದೇಹ ಮತ್ತು ನನ್ನ ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ನಾನು ಇತ್ತೀಚೆಗೆ ಕಲಿತದ್ದು ಏನೆಂದರೆ, 33 ರ ನಂತರ, ದೇಹವು ನಿಮಗೆ ಅಗತ್ಯವಿದ್ದರೆ ಅದನ್ನು ತಲುಪಿಸುತ್ತದೆ ಎಂದು ನಾನು ನಂಬುತ್ತೇನೆ, ಆದರೆ ನಿಜವಾದ ಯುದ್ಧ ಮಾನಸಿಕತೆಯಾಗಿದೆ ಎಂದಿದ್ದಾರೆ.

ನಾನು 40, 41, ಅಥವಾ 42 ವರ್ಷ ವಯಸ್ಸಿನವರೆಗೂ ಆಡಲು ಹೋಗುತ್ತೇನೆ ಎಂದು ಬಯಸುತ್ತೇನೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನನ್ನ ದೈನಂದಿನ ಗುರಿಯು ಆ ಕ್ಷಣವನ್ನು ಆನಂದಿಸುವುದಾಗಿದೆ ಎನ್ನುತ್ತಾರೆ ಕ್ರಿಸ್ಟಿಯಾನೋ ರೊನಾಲ್ಡೊ.

https://www.instagram.com/p/CZnOsSxgqoO/?utm_source=ig_embed&ig_rid=e031a850-fb72-44e1-81d4-7da5f295df65

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...