ಉತ್ತರಾಖಂಡದ ರೂರ್ಕಿಯ ನರ್ಸನ್ ಗಡಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರ ಸಕ್ಷಮ್ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ರವಾನಿಸಲಾಗಿದೆ.
ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ರಿಷಬ್ ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತದ ನಂತರ ಕ್ರಿಕೆಟಿಗ ರಿಷಬ್ ಪಂತ್ ಸ್ವತಃ ಆಂಬ್ಯುಲೆನ್ಸ್ ಗೆ ಕರೆ ಮಾಡಬೇಕಾಯಿತು. ಸ್ಥಳದಲ್ಲಿದ್ದ ವ್ಯಕ್ತಿಗಳು ಅವರ ಬ್ಯಾಗ್‌ನಿಂದ ಹಣವನ್ನು ದೋಚಿದ್ದಾರೆ ಎಂದು ಹೇಳಲಾಗಿದೆ.
ಪಂತ್ ಅವರ ಕಾರ್ ಮಣ್ಣಿನ ರಾಶಿಗೆ ಡಿಕ್ಕಿ ಹೊಡೆದು ಅನೇಕ ಬಾರಿ ಉರುಳಿತು ಎಂದು ಪ್ರತ್ಯಕ್ಷದರ್ಶಿ ಕುಶಾಲ್ ಹೇಳಿದ್ದಾರೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗಾರ್ಡ್ ರೇಲ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ.
ರಿಷಬ್ ಪಂತ್ ಅವರು ತಮ್ಮ ಕಾರಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಗಾಯದಿಂದಾಗಿ ಅದು ಸಾಧ್ಯವಾಗಲಿಲ್ಲ. ಈ ನಡುವೆ ಆ ಪ್ರದೇಶದಲ್ಲಿದ್ದ ಕೆಲವರು ಬೆಂಕಿ ಹೊತ್ತಿಕೊಂಡ ಕಾರಿನ ಬಳಿ ಬಂದರು. ಗಾಯಗೊಂಡ ಕ್ರಿಕೆಟಿಗನಿಗೆ ಸಹಾಯ ಮಾಡುವ ಬದಲು, ಅವರು ಕ್ರಿಕೆಟಿಗನ ಕಾರ್ ನಲ್ಲಿದ್ದ ಬ್ಯಾಗ್‌ನಿಂದ ಹಣವನ್ನು ತೆಗೆದುಕೊಂಡು ಓಡಿಹೋದರು ಎಂದು ಹೇಳಲಾಗಿದೆ.
ಸ್ವತಃ ಪಂತ್ ಅವರೇ ಕಿಟಕಿ ಒಡೆದು ಕಾರಿನಿಂದ ಹೊರಬಂದು ಆಂಬ್ಯುಲೆನ್ಸ್ ಮತ್ತು ಪೊಲೀಸರಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ.