ಐಪಿಎಲ್ 2013 ಇಡೀ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಐಪಿಎಲ್ 2013 ರಲ್ಲಿ ಸ್ಪಾಟ್ ಫಿಕ್ಸಿಂಗ್ ಬಹಿರಂಗಗೊಂಡು, ಎಸ್. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡಿಲಾ ಬಂಧನಕ್ಕೊಳಗಾಗಿದ್ದರು. ಶ್ರೀಶಾಂತ್ ನಿಷೇಧ ಸದ್ಯದಲ್ಲಿಯೇ ಕೊನೆಗೊಳ್ಳಲಿದ್ದು, ಮತ್ತೆ ಮೈದಾನಕ್ಕೆ ವಾಪಸ್ ಆಗಲಿದ್ದಾರೆ. 2012 ರಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದ ಮಾಜಿ ರಾಜಸ್ಥಾನ್ ರಾಯಲ್ಸ್ ಕ್ರಿಕೆಟಿಗ ಮತ್ತು ಎಡಗೈ ಸ್ಪಿನ್ನರ್ ಹರ್ಮೀತ್ ಸಿಂಗ್ ಶ್ರೀಶಾಂತ್ ಬಗ್ಗೆ ಕುತೂಹಲಕಾರಿ ವಿಷ್ಯ ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ ತಂಡದಲ್ಲಿದ್ದಾಗ ಶ್ರೀಶಾಂತ್, ಹರ್ಮೀತ್ ಸಿಂಗ್ ರೂಮ್ ಪಕ್ಕದ ರೂಮಿನಲ್ಲಿರುತ್ತಿದ್ದರಂತೆ. ಶ್ರೀಶಾಂತ್ ರಾತ್ರಿ ಪೂರ್ತಿ ಪಾರ್ಟಿ ಮಾಡಿದ್ದರಂತೆ. ಹುಡುಗಿಯರು ಬಂದು ಹೋಗಿ ಮಾಡ್ತಿದ್ದರಂತೆ. ಬೇರೆ ಆಟಗಾರರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಹರ್ಮೀತ್ ಸಿಂಗ್ ಗೆ ಪಕ್ಕದ ಕೋಣೆ ನೀಡ್ತಿದ್ದರಂತೆ.
2013ರಲ್ಲಿ ಶ್ರೀಶಾಂತ್ ಕೋಣೆಗೆ ಹುಡುಗಿ ಬರ್ತಿರುವ ದೃಶ್ಯ ಬಹಿರಂಗವಾಗಿತ್ತು. ಶ್ರೀಶಾಂತ್ ನಾನು ಬೆಳಿಗ್ಗೆ ಎದ್ದು ಜಿಮ್ ಗೆ ಹೋಗ್ತಿದ್ದರೆ ಅವರು ಪಾರ್ಟಿ ಮಾಡ್ತಿರುತ್ತಿದ್ದರು. ಹಾಗಾಗಿ ಅವ್ರ ಕೋಣೆಗೆ ಬರುವವರ ಬಗ್ಗೆ ವಿಶೇಷ ಗಮನ ನೀಡ್ತಿರಲಿಲ್ಲ ಎಂದಿದ್ದಾರೆ. ಚುರುಕು ಹಾಗೂ ಸುಂದರವಾಗಿದ್ದ ಶ್ರೀಶಾಂತ್ ಜೊತೆ ಹುಡುಗಿಯರಿರುತ್ತಿದ್ದರು, ಹಾಗಾಗಿ ನಾನು ಅವ್ರನ್ನು ಎಂದೂ ಅನುಮಾನಿಸಲಿಲ್ಲವೆಂದು ಹರ್ಮೀತ್ ಹೇಳಿದ್ದಾರೆ.
ಶ್ರೀಶಾಂತ್ ಎಷ್ಟು ಪಾರ್ಟಿ ಮಾಡ್ತಿದ್ದರೆಂದ್ರೆ ಅವ್ರ ಹೊಟೇಲ್ ಬಿಲ್ 2-3 ಲಕ್ಷ ರೂಪಾಯಿ ಬರ್ತಿತ್ತು. ತಮ್ಮ ಮದ್ಯವನ್ನು ತಾವೇ ಖರೀದಿ ಮಾಡಿದ್ದ ಶ್ರೀಶಾಂತ್ ಬೇರೆಯವರಿಗೂ ಉಡುಗೊರೆ ನೀಡ್ತಿದ್ದರು. ಎರಡು ವಿಶ್ವಕಪ್ ಗೆದ್ದಿದ್ದ ಹಾಗೂ ಐಪಿಎಲ್ ಆಡಿದ್ದ ಶ್ರೀಶಾಂತ್ ಶ್ರೀಮಂತರೆಂದು ನಾನು ಭಾವಿಸಿದ್ದೆ ಎಂದಿದ್ದಾರೆ. ಹಾಗಾಗಿ ನಾವು ಫಿಕ್ಸಿಂಗ್ ಬಗ್ಗೆ ಯೋಚಿಸಲಿಲ್ಲ ಎಂದಿದ್ದಾರೆ.