
ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಮತ್ತೊಮ್ಮೆ ಸುರೇಶ್ ರೈನಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಸುರೇಶ್ ರೈನಾ ಖಂಡಿತವಾಗಿಯೂ ನನ್ನ ಮಗನಂತೆ. ಆದರೆ ಅವರ ಮೇಲೆ ನನಗೆ ಯಾವುದೇ ಹಕ್ಕಿಲ್ಲ ಎಂದಿದ್ದಾರೆ. ರೈನಾ ಹಿಂದಿರುಗುವ ಬಗ್ಗೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ನಿರ್ಧಾರ ಕೈಗೊಳ್ಳಲಿದೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.
ರೈನಾ ವಾಪಸ್ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸನ್, ನಾನು ತಂಡದ ಮಾಲೀಕ. ಪ್ರಾಂಚೈಸಿ ಮಾಲೀಕ. ಆದ್ರೆ ಆಟಗಾರರ ಮಾಲೀಕನಲ್ಲ. ಅವ್ರ ಮೇಲೆ ನನಗೆ ಹಕ್ಕಿಲ್ಲ. ಈ ನಿರ್ಧಾರ ತೆಗೆದುಕೊಳ್ಳುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ಶ್ರೀನಿವಾಸನ್ ಹೇಳಿದ್ದಾರೆ.
ನಿನ್ನ ಸಂದರ್ಶನವೊಂದರಲ್ಲಿ ರೈನಾ ಐಪಿಎಲ್ ಗೆ ವಾಪಸ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಲ್ಲಿಯೇ ಅಭ್ಯಾಸ ಮಾಡ್ತಿದ್ದೇನೆ ಎಂದಿದ್ದಾರೆ.
ಈ ಮಧ್ಯೆ ಸಿಎಸ್ಕೆ ಸಿಇಒ ವಿಶ್ವನಾಥ್ ನಾವು ಎಲ್ಲ ಆಟಗಾರರನ್ನು ಬೆಂಬಲಿಸುತ್ತೇವೆ. ವೈಯಕ್ತಿಕ ಕಾರಣಕ್ಕೆ ಅವರು ವಾಪಸ್ ಹೋಗಿದ್ದಾರೆ. ಆಟಗಾರ ಫಿಟ್ ಆಗಿದ್ದಲ್ಲಿ ಹಿಂತಿರುಗಬಹುದು. ನಾವು ಆಟಗಾರರನ್ನು ಯಾವಾಗ್ಲೂ ಬೆಂಬಲಿಸುತ್ತೇವೆಂದು ಹೇಳಿದ್ದಾರೆ.