
ಎಂ.ಎಸ್. ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ತಮ್ಮ 32ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸಿಎಸ್ಕೆ ಜೊತೆ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕ್ಷಿ, ತಮ್ಮ ದಾಂಪತ್ಯದ ಅನೇಕ ಕ್ಷಣಗಳನ್ನ ಹಂಚಿಕೊಂಡಿದ್ದಾರೆ.
2015ರ ಫೆಬ್ರವರಿ 6 ರಂದು ಸಾಕ್ಷಿ ಹೆರಿಗೆ ನೋವಿನಿಂದ ಗುರುಗಾಂವ್ನ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರಂತೆ. ಆದರೆ ಈ ವೇಳೆ ಧೋನಿ ವಿಶ್ವಕಪ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ಪತಿ ಈ ಕ್ಷಣದಲ್ಲಿ ತನ್ನ ಜೊತೆ ಇರಬೇಕೆಂಬ ಆಸೆ ಇದ್ದರೂ ಸಹ ಸಾಕ್ಷಿ ತಮ್ಮ ಪತಿಯ ವೃತ್ತಿಯನ್ನ ಗೌರವಿಸಿ ಅವರನ್ನ ಟೂರ್ನಿಗೆ ಕಳುಹಿಸಿ ಕೊಟ್ಟಿದ್ದರಂತೆ.
ನನಗೆ ಹೆರಿಗೆಯಾದ ಬಳಿಕ ಅನೇಕರು ಧೋನಿ ಬರಲಿಲ್ಲವಾ ಎಂದು ಕೇಳಿದ್ದರು. ಅವರಿಗೆಲ್ಲ ನಾನು ನಗುತ್ತಲೇ, ನನಗೆ ಧೋನಿ ನನ್ನ ಜೀವನದ ಮೊದಲ ಆದ್ಯತೆ. ಧೋನಿಗೆ ಕ್ರಿಕೆಟ್ ಅವರ ಜೀವನದ ಮೊದಲ ಆದ್ಯತೆ ಎಂದು ಉತ್ತರಿಸಿದ್ದರಂತೆ.