ಸೆಪ್ಟೆಂಬರ್ 29ರಂದು ನಡೆದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮೊದಲ ಸೋಲುಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ತಂಡ ಸೋಲಿನ ಕಹಿ ಅನುಭವಿಸಿದೆ ಇದಕ್ಕೂ ಮೊದಲು ಆಡಿದ ಎರಡೂ ಪಂದ್ಯಗಳಲ್ಲಿ ದೆಹಲಿ ಗೆಲುವಿನ ನಗೆ ಬೀರಿತ್ತು.
ಸೋಲಿನ ನೋವಿನಲ್ಲಿ ನಾಯಕ ಶ್ರೇಯಸ್ ಅಯ್ಯರ್‌ಗೆ ದಂಡದ ಬಿಸಿ ತಟ್ಟಿದೆ. ನಿಧಾನಗತಿಯ ಆಟಕ್ಕಾಗಿ ಶ್ರೇಯಸ್ 12 ಲಕ್ಷ ರೂಪಾಯಿ ದಂಡ ನೀಡಬೇಕಾಗಿದೆ. ಐಪಿಎಲ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಇದು ಐಪಿಎಲ್ ನೀತಿ ಸಂಹಿತೆಯಡಿ ಶ್ರೇಯಸ್ ಅಯ್ಯರ್ ಅವರ ಮೊದಲ ನಿಧಾನಗತಿಯ ಓವರ್-ರೇಟ್ ಪ್ರಕರಣವಾಗಿದೆ.
ನಿಧಾನಗತಿ ಆಟಕ್ಕೆ ದಂಡ ವಿಧಿಸಲ್ಪಟ್ಟ ಎರಡನೇ ನಾಯಕ ಶ್ರೇಯಸ್ ಅಯ್ಯರ್. ಈ ಹಿಂದೆ ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಸೋಲು, ದಂಡದ ಮಧ್ಯೆ ದೆಹಲಿಗೆ ಇನ್ನೊಂದು ಆಘಾತವಾಗಿದೆ. ದೆಹಲಿ ತಂಡ ಟಾಪ್ ಒನ್ ಸ್ಥಾನವನ್ನು ಕಳೆದುಕೊಂಡಿದೆ. ಅಂಕಪಟ್ಟಿಯಲ್ಲಿ ದೆಹಲಿ ಈಗ ಎರಡನೇ ಸ್ಥಾನಕ್ಕಿಳಿದಿದೆ.