ಸತತ ಎರಡು ಸೋಲಿನ ನಂತ್ರ ಚೆನ್ನೈ ಸೂಪರ್ ಕಿಂಗ್ಸ್ ಇಂದು ಗೆಲುವಿನ ತಂತ್ರದೊಂದಿಗೆ ಮೈದಾನಕ್ಕಿಳಿಯಲಿದೆ. ಧೋನಿ ಒತ್ತಡದಲ್ಲಿದ್ದಾರೆ. ಅಂಕ ಪಟ್ಟಿಯಲ್ಲಿ ಧೋನಿ ತಂಡ ಕೆಳಗಿದೆ. ಈ ಮಧ್ಯೆ ಧೋನಿ ಪತ್ನಿ ಸಾಕ್ಷಿ ಪತಿಯನ್ನು ಮಿಸ್ ಮಾಡಿಕೊಳ್ತಿದ್ದಾರಂತೆ.
ವೆಬ್ ಸೈಟ್ ಒಂದರ ಜೊತೆ ಮಾತನಾಡಿದ ಸಾಕ್ಷಿ ಧೋನಿ ಈ ವಿಷ್ಯವನ್ನು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯದಲ್ಲಿ ಆಟಗಾರರ ಜೊತೆ ಕುಟುಂಬಸ್ಥರಿಲ್ಲ. ಕೊರೊನಾ ಹಿನ್ನಲೆಯಲ್ಲಿ ಪಂದ್ಯ ಯುಎಇನಲ್ಲಿ ನಡೆಯುತ್ತಿದೆ. ಹಾಗಾಗಿ ಆಟಗಾರರ ಕುಟುಂಬಸ್ಥರು ಅಲ್ಲಿಗೆ ತೆರಳಿಲ್ಲ. ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತ್ರ ಧೋನಿ ಕುಟುಂಬದ ಜೊತೆಗಿದ್ದರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸತತ 5 ತಿಂಗಳು ರಾಂಚಿಯಲ್ಲಿದ್ದ ಧೋನಿ ಹೊರಗೆ ಹೋಗಿರಲಿಲ್ಲ.
ಈಗ ಧೋನಿ ಯುಎಇಗೆ ತೆರಳಿದ್ದಾರೆ. ಅವರನ್ನು ಸಾಕ್ಷಿ ಧೋನಿ ಹಾಗೂ ಜೀವಾ ಮಿಸ್ ಮಾಡಿಕೊಳ್ತಿದ್ದಾರೆ. ನಾವು ಐಪಿಎಲ್ ಪಂದ್ಯವನ್ನು ಮಿಸ್ ಮಾಡಿಕೊಳ್ತಿಲ್ಲ. ಟಿವಿಯಲ್ಲಿ ಪಂದ್ಯ ವೀಕ್ಷಣೆ ಮಾಡ್ತಿದ್ದೇವೆ. ಆದ್ರೆ ಪತಿ ಧೋನಿಯನ್ನು ಮಿಸ್ ಮಾಡಿಕೊಳ್ತಿದ್ದೇವೆಂದು ಸಾಕ್ಷಿ ಹೇಳಿದ್ದಾರೆ.