ಐಪಿಎಲ್ ಲೀಗ್ ಕೊನೆ ಹಂತದಲ್ಲಿದೆ. ಪ್ಲೇ ಆಫ್ ತಲುಪಲು ಎಲ್ಲ ತಂಡಗಳು ಪ್ರಯತ್ನ ನಡೆಸುತ್ತಿವೆ. ಆದ್ರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಸಮಯದಲ್ಲಿ ಬ್ಯಾಡ್ ನ್ಯೂಸ್ ಸಿಗ್ತಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆ ತಂಡಕ್ಕೆ ನಷ್ಟವುಂಟು ಮಾಡುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಗಾಯಗೊಂಡಿದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಾನ ಪಡೆದಿಲ್ಲ. ಐಪಿಎಲ್ ನ ಮುಂದಿನ ಪಂದ್ಯಗಳಲ್ಲೂ ಅವ್ರು ಆಡುವುದು ಅನುಮಾನ.
ಸೋಮವಾರ, ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ 20 ತಂಡಗಳನ್ನು ಪ್ರಕಟಿಸಿದೆ. ಆದರೆ ಈ ತಂಡದಲ್ಲಿ ರೋಹಿತ್ ಶರ್ಮಾ ಹೆಸರಿಲ್ಲ. ರೋಹಿತ್ ಗಾಯದ ಬಗ್ಗೆ ವೈದ್ಯಕೀಯ ತಂಡ ನಿಗಾ ವಹಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಿಸಿಸಿಐ ತಿಳಿಸಿದೆ. ಆದರೆ ಯಾವ ರೀತಿಯ ಗಾಯವಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಗಾಯದ ಬಗ್ಗೆ ಮುಂಬೈ ಇಂಡಿಯನ್ಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸೋಮವಾರ ತಂಡದ ಘೋಷಣೆ ವೇಳೆ ಮುಂಬೈ ತಂಡ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ರೋಹಿತ್ ಶರ್ಮಾ ಅಭ್ಯಾಸ ಮಾಡುತ್ತಿದ್ದಾರೆ. ಗಾಯದ ನಂತರ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 18 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ರೋಹಿತ್ ಶರ್ಮಾ ಮೈದಾನಕ್ಕಿಳಿದಿಲ್ಲ.