alex Certify ʼಐಪಿಎಲ್ʼ‌ ಪಂದ್ಯವಾಡುವ ಕುರಿತು ಧೋನಿಯಿಂದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಐಪಿಎಲ್ʼ‌ ಪಂದ್ಯವಾಡುವ ಕುರಿತು ಧೋನಿಯಿಂದ ಮಹತ್ವದ ನಿರ್ಧಾರ

ಐಪಿಎಲ್ ಗೆ ದಿನಗಣನೆ ಶುರುವಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪಂದ್ಯ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಕೊರೊನಾ, ರೈನಾ, ಹರ್ಭಜನ್ ವಿಷ್ಯಗಳು ಅವ್ರ ಮನಸ್ಸು ಕೆಡಿಸಿತ್ತು. ಆದ್ರೀಗ ಅಭಿಮಾನಿಗಳು ಮೆಚ್ಚುವ ಕೆಲಸವನ್ನು ಧೋನಿ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಧೋನಿ ತಂಡಕ್ಕೆ ಅಭ್ಯಾಸಕ್ಕೆ ಹೆಚ್ಚು ಸಮಯ ಸಿಕ್ಕಿಲ್ಲ. ಹಾಗಾಗಿ ಐಪಿಎಲ್ ಮೊದಲ ಪಂದ್ಯದ ಬದಲು ಐದನೇ ಪಂದ್ಯ ಆಡಲು ಅವಕಾಶ ನೀಡಲಾಗಿತ್ತು. ಆದ್ರೆ ಧೋನಿ ಈ ಆಫರ್ ತಳ್ಳಿ ಹಾಕಿದ್ದಾರೆ.

ಸೆಪ್ಟೆಂಬರ್ 19ರಂದು ಮುಂಬೈ ಇಂಡಿಯನ್ಸ್ ಜೊತೆ ಮೊದಲ ಪಂದ್ಯವಾಡಲು ನಾವು ಸಿದ್ಧ ಎಂದಿದ್ದಾರೆ. ಹೆಚ್ಚಿನ ಅವಕಾಶ ನಮಗೆ ಬೇಡವೆಂದು ಧೋನಿ ಹೇಳಿದ್ದಾರೆ. ಧೋನಿ ತಂಡ ಆರು ದಿನಗಳಲ್ಲಿ 3 ಪಂದ್ಯಗಳನ್ನು ಆಡಬೇಕಿದೆ. ಮೊದಲ ವಾರದಲ್ಲಿ ಸಿಎಸ್ಕೆ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಆರಂಭಿಕ ಪಂದ್ಯದ ಮೊದಲು ತಂಡ ಎಲ್ಲ ಸಮಸ್ಯೆಯಿಂದ ಹೊರ ಬರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...