ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲುಂಡ ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿಗೆ ಸಂಕಷ್ಟ ಬೆನ್ನು ಹತ್ತಿದೆ. ನಿಧಾನಗತಿಯ ಬೌಲಿಂಗ್ ಕಾರಣಕ್ಕೆ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ವಿರಾಟ್ ಕೊಹ್ಲಿ ತಂಡವು ನಿಗದಿತ ಸಮಯದಲ್ಲಿ 20 ಓವರ್‌ಗಳನ್ನು ಪೂರ್ಣಗೊಳಿಸಲಿಲ್ಲ. ಇದರಿಂದಾಗಿ ಪಂಜಾಬ್‌ನ ಇನ್ನಿಂಗ್ಸ್ ತಡವಾಗಿ ಕೊನೆಗೊಂಡಿತು. ಐಪಿಎಲ್ ನಿಯಮಗಳ ಪ್ರಕಾರ, ಸಮಯಕ್ಕೆ ಓವರ್ ಪೂರ್ಣಗೊಳಿಸದ ಕಾರಣ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಹಾಗಾಗಿ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಇದೇ ತಪ್ಪು ಪುನಾವರ್ತನೆಗೊಂಡಲ್ಲಿ ನಾಯಕಯನನ್ನು ಅಮಾನತುಗೊಳಿಸಲಾಗುತ್ತದೆ.
ವಿರಾಟ್ ಕೊಹ್ಲಿ ಗುರುವಾರ ಆರು ಬೌಲರ್ ಗಳಿಗೆ ಅವಕಾಶ ನೀಡಿದ್ದರು. ಪ್ರತಿ ಓವರ್ ಮುಗಿದ ನಂತ್ರ ಬೌಲರ್ ಜೊತೆ ಮಾತನಾಡುತ್ತಿದ್ದರು. ಇದ್ರಿಂದ ಇನ್ನಿಂಗ್ಸ್ ಮುಗಿಯುವುದು ತಡವಾಯ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅವಮಾನಕರ ಸೋಲನ್ನು ಅನುಭವಿಸಿದೆ. 97 ರನ್‌ಗಳ ಅಂತರದಲ್ಲಿ ಪಂಜಾಬ್ ಬೆಂಗಳೂರು ತಂಡವನ್ನು ಮಣಿಸಿದೆ.