ಪ್ರತಿಯೊಂದು ವಿಷ್ಯವೂ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತದೆ. ಸಣ್ಣದಿರಲಿ, ದೊಡ್ಡದಿರಲಿ ಸೆಲೆಬ್ರಿಟಿಗಳ ವಿಷ್ಯ ಬಂದಾಗ ಜನರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಾರೆ.
ಪಂಜಾಬ್ ಮುಂದೆ ಬೆಂಗಳೂರು ತಂಡ ಹೀನಾಯ ಸೋಲು ಕಾಣುತ್ತಿದ್ದಂತೆ ಕೊಹ್ಲಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರ್ತಿವೆ. ಐಪಿಎಲ್ ಕಾಮೆಂಟರಿ ವೇಳೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಅನುಷ್ಕಾ ಶರ್ಮಾ ಹೆಸರನ್ನು ತೆಗೆದುಕೊಂಡು ವಿರಾಟ್ ಬಗ್ಗೆ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯೆಬ್ಬಿಸಿದೆ.
ಲಾಕ್ ಡೌನ್ ವೇಳೆ ಅನುಷ್ಕಾ ಬೌಲಿಂಗ್ ಅಭ್ಯಾಸವನ್ನು ಮಾತ್ರ ವಿರಾಟ್ ಕೊಹ್ಲಿ ಮಾಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಅನುಷ್ಕಾ ಬೌಲಿಂಗ್ ಮಾಡ್ತಿದ್ದು, ಕೊಹ್ಲಿ ಬ್ಯಾಟಿಂಗ್ ಮಾಡ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಗವಾಸ್ಕರ್ ಈ ಹೇಳಿಕೆ ನೀಡಿರುವ ಸಾಧ್ಯತೆಯಿದೆ. ಆದ್ರೆ ಗವಾಸ್ಕರ್ ಈ ಹೇಳಿಕೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಐಪಿಎಲ್ ಕಾಮೆಂಟರಿ ತಂಡದಿಂದ ಗವಾಸ್ಕರ್ ತೆಗೆಯುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಕೆಲವರು ಇದು ವೈಯಕ್ತಿಕ ಕಮೆಂಟ್ ಎಂದ್ರೆ ಮತ್ತೆ ಕೆಲವರು ಡಬಲ್ ಮೀನಿಂಗ್ ಕಮೆಂಟ್ ಎಂದಿದ್ದಾರೆ. ಆಟಗಾರನ ಕಳಪೆ ಪ್ರದರ್ಶನಕ್ಕೆ ಪತ್ನಿಯನ್ನು ಕಾರಣ ಮಾಡಬಾರದು ಎಂದು ಕೆಲವರು ಹೇಳಿದ್ದಾರೆ.