ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಈ ಮೂರು ನಗರಗಳ ಪೈಕಿ ಅಬುಧಾಬಿಯಲ್ಲಿ ಕೊರೊನಾ ವೈರಸ್‌ನ ಪ್ರೋಟೋಕಾಲ್ ಕಠಿಣವಾಗಿದೆ. ಇದು ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ.
ಅಬುಧಾಬಿ ಪ್ರವೇಶಕ್ಕೆ ಮೊದಲು ಕೊರೊನಾ ಪರೀಕ್ಷೆಯ ವರದಿ ನೀಡಬೇಕು. 48 ಗಂಟೆಗಿಂತ ಮೊದಲು ನಡೆಸಿದ ವರದಿಯನ್ನು ಸ್ವೀಕರಿಸುವುದಿಲ್ಲ. ಪರೀಕ್ಷೆಗೆ ಎರಡುವರೆ ಗಂಟೆ ಬೇಕಾಗುತ್ತದೆ. ಧೋನಿ ಹಾಗೂ ಕೊಹ್ಲಿ ತಂಡಗಳು ದುಬೈನಿಂದ ಅಬುಧಾಬಿಗೆ ಹೋದ್ರೆ ಅಲ್ಲಿ ಸಾಲಿನಲ್ಲಿ ನಿಂತು ಪರೀಕ್ಷೆ ಮಾಡಿಸಬೇಕು. ಇದನ್ನು ತಪ್ಪಿಸಲು ಬಿಸಿಸಿಐ ಹೊಟೇಲ್ ನಲ್ಲಿಯೇ ಪರೀಕ್ಷೆ ನಡೆಸುವ ಬಗ್ಗೆ ಸ್ಥಳೀಯ ಆಡಳಿತದ ಜೊತೆ ಮಾತನಾಡ್ತಿದೆ.
ಈ ಎಲ್ಲದರ ಮಧ್ಯೆ ಐಪಿಎಲ್ ಪಂದ್ಯಗಳು ರದ್ದಾದ್ರೆ ಎಂಬ ಭಯ ಪ್ರಾಂಚೈಸಿಗಳನ್ನು ಕಾಡ್ತಿದೆ. ರದ್ದು ಮಾಡುವ ನಿರ್ಧಾರವನ್ನು ಬಿಸಿಸಿಐ ಈಗ್ಲೇ ತೆಗೆದುಕೊಳ್ಳಬೇಕು. ಇನ್ನು 15 ದಿನಗಳ ನಂತ್ರ ತೆಗೆದುಕೊಂಡಲ್ಲಿ ಪ್ರಾಂಚೈಸಿಗಳು ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗಾಗಲೇ ಪ್ರಾಂಚೈಸಿಗಳು ಸಾಕಷ್ಟು ಖರ್ಚು ಮಾಡಿವೆ. ಜೊತೆಗೆ ಆಟಗಾರರು ಪಂದ್ಯ ಆಡಿದ್ದಾರಾ ಎಂಬ ಪ್ರಶ್ನೆ ಬರುವುದಿಲ್ಲ. ಐಪಿಎಲ್ ಗಾಗಿ ಯುಎಇಗೆ ಬಂದ ಕಾರಣ ಅವ್ರಿಗೆ ಹಣ ಪಾವತಿಸಬೇಕಾಗುತ್ತದೆ. ಇದು ದೊಡ್ಡ ಹೊಣೆಯೆಂದು ಅಧಿಕಾರಿ ಹೇಳಿದ್ದಾರೆ.