ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಬೇಸರದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಖುಷಿ ನೀಡಿದೆ. ಈಗ ಕ್ರಿಕೆಟ್ ಪ್ರೇಮಿಗಳು ಖುಷಿ ಪಡುವ ಇನ್ನೊಂದು ವಿಷ್ಯ ಹೊರಬಿದ್ದಿದೆ. ನವೆಂಬರ್ 26 ರಿಂದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ಉಭಯ ದೇಶಗಳ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಮೊದಲ ಪಂದ್ಯವು ಡೇ ಆಂಡ್ ನೈಟ್ ಪಂದ್ಯವಾಗಿರಲಿದೆ. ಈ ಪಂದ್ಯವನ್ನು ಅಡಿಲೇಡ್ನಲ್ಲಿ ಆಡಲಾಗುವುದು. ಈ ಪ್ರವಾಸದಲ್ಲಿ ಏಕದಿನ ಮತ್ತು ಟಿ 20 ಪಂದ್ಯಗಳ 3–3 ಪಂದ್ಯಗಳು ಸಹ ನಡೆಯಲಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಆಸ್ಟ್ರೇಲಿಯಾ ಸರ್ಕಾರದ ಒಪ್ಪಿಗೆಗೆ ಮಂಡಳಿ ಕಾಯ್ತಿದೆ.
ಮಾಹಿತಿ ಪ್ರಕಾರ, ಐಪಿಎಲ್ ಮುಗಿದ ನಂತ್ರ ಟೀಂ ಇಂಡಿಯಾ ಭಾರತಕ್ಕೆ ವಾಪಸ್ ಬರ್ತಿಲ್ಲ. ಅಲ್ಲಿಂದಲೇ ಬ್ರಿಸ್ಬೇನ್ ಗೆ ತಲುಪಲಿದೆ. ಏಕದಿನ ಸರಣಿಯನ್ನು ನವೆಂಬರ್ 25-30ರ ನಡುವೆ ಆಡಲಾಗುವುದು. ಟಿ-20 ಪಂದ್ಯವು ಡಿಸೆಂಬರ್ 4 ಮತ್ತು 8 ರ ನಡುವೆ ನಡೆಯಲಿದೆ. ನಂತ್ರ ಟೆಸ್ಟ್ ಪಂದ್ಯ ಶುರುವಾಗಲಿದೆ.