ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಈ ಬಾರಿ ತಡವಾಗಿ ಆರಂಭಗೊಂಡಿರುವ ಐಪಿಎಲ್ ಅನ್ನು ಯುಎಇನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಫುಲ್ ಹೌಸ್ ಕ್ರೀಡಾಂಗಣಗಳಲ್ಲಿ ಆಡಿ ಅಭ್ಯಾಸ ಇರುವ ಕ್ರಿಕೆಟಿಗರಿಗೆ ಅಲ್ಲಿ ಖಾಲಿ ಪೆವಿಲಿಯನ್ಗಳ ಎದುರು ಆಡುವುದು ಹೊಸ ಅನುಭವ.
ಪ್ರೇಕ್ಷಕರ ಸದ್ದಿನ ನಡುವೆ ಆಟವನ್ನು ನೋಡಿ ಅಭ್ಯಾಸವಾಗಿರುವ ಟಿವಿ ವೀಕ್ಷಕರಿಗೆ, ಖಾಲಿ ಸ್ಟೇಡಿಯಂನಲ್ಲೂ ಸಹ ಫ್ಯಾನ್ಸ್ಗಳ ಗದ್ದಲದ ಅನುಭವ ಕೊಡಲು ಕೃತಕ ಕರತಾಡನದ ವಾಯ್ಸ್ ಓವರ್ ವ್ಯವಸ್ಥೆ ಮಾಡಲಾಗಿತ್ತು. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯದಲ್ಲಿ ಅಬುಧಾಬಿಯ ಸ್ಟೇಡಿಯಂ ಖಾಲಿ ಇದ್ದರೂ ಸಹ, ಪ್ರತಿಯೊಂದು ಬೌಂಡರಿ ಅಥವಾ ವಿಕೆಟ್ ಪತನಗೊಂಡ ಸಂದರ್ಭದಲ್ಲಿ ಪ್ರೇಕ್ಷಕರ ಕರತಾಡನ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು.
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಮಾಡಿಕೊಂಡಿರುವ ವ್ಯವಸ್ಥೆಯ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಮಂದಿ ಈ ಫೇಕ್ ವಾಯ್ಸ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
https://twitter.com/ManagerDMPC/status/1307359775093530626?ref_src=twsrc%5Etfw%7Ctwcamp%5Etweetembed%7Ctwterm%5E1307359775093530626%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fnew-normal-ipl-fans-make-noise-on-twitter-after-mi-vs-csk-match-uses-fake-crowd-sound-2892623.html