ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುರುಷರ 73 ಕೆಜಿ ವಿಭಾಗದಲ್ಲಿ ಅಚಿಂತಾ ಶೆಯುಲಿ ಚಿನ್ನದ ಪದಕ ಗಳಿಸಿದ್ದಾರೆ.
ಇದರೊಂದಿಗೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರೆತಿದೆ. ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಅಚಿಂತಾ ಶೈಯುಲಿ ಚಿನ್ನದ ಪದಕ ಗಳಿಸಿದ್ದಾರೆ. ಪುರುಷರ 73 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಅವರು ಸ್ವರ್ಣ ಪದಕ ಗಳಿಸಿದ್ದಾರೆ. ಭಾರತಕ್ಕೆ 6 ಪದಕ ದೊರೆತಿವೆ.
ಭಾರತದ ತಾರೆ ಜೆರೆಮಿ ಲಾಲ್ರಿನ್ನುಂಗಾ ಅವರು ಚಿನ್ನದ ಪದಕ ಗೆದಿದ್ದರು. ಶನಿವಾರ ಮೀರಾಬಾಯಿ ಚಾನು(ಮಹಿಳೆಯರ 49 ಕೆಜಿ ವಿಭಾಗ) ಚಿನ್ನ ಗೆದ್ದರೆ, ಬಿಂದ್ಯಾರಾಣಿ ದೇವಿ(ಮಹಿಳೆಯರ 55 ಕೆಜಿ ವಿಭಾಗ) ಮತ್ತು ಸಂಕೇತ್ ಸರ್ಗರ್ (ಪುರುಷರ 55 ಕೆಜಿ ವಿಭಾಗ) ಬೆಳ್ಳಿ ಪದಕ ಜಯಿಸಿದ್ದರು. ಪುರುಷರ 61 ಕೆಜಿ ವಿಭಾಗದಲ್ಲಿ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಭಾನುವಾರ, ಶೆಯುಲಿ 73 ಕೆಜಿ ವಿಭಾಗದಲ್ಲಿ ತನ್ನ ಸ್ನ್ಯಾಚ್ ಸುತ್ತನ್ನು 137 ಕೆಜಿಯಷ್ಟು ಎತ್ತುವ ಮೂಲಕ ಪ್ರಾರಂಭಿಸಿದರು. ಅವರು ತಮ್ಮ ಉತ್ತಮ ಪ್ರಯತ್ನವನ್ನು ಮುಂದುವರೆಸಿ ಎರಡನೇ ಪ್ರಯತ್ನದಲ್ಲಿ 140 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ಮೊದಲ ಲಿಫ್ಟ್ ನೊಂದಿಗೆ ಶೆಯುಲಿ 309 ಕೆಜಿಗಳ ಒಟ್ಟು ಲಿಫ್ಟ್ ನೊಂದಿಗೆ ಆಟಗಳ ದಾಖಲೆಯನ್ನು ಸ್ಥಾಪಿಸಿ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದರು. ಅಂತಿಮ ಪ್ರಯತ್ನದಲ್ಲಿ 170 ಕೆಜಿ ಎತ್ತಲು ಸಾಧ್ಯವಾಯಿತು. ಅವರು 313 ಕೆಜಿ ಭಾರವೆತ್ತಿ ತಮ್ಮದೇ ಗೇಮ್ಸ್ ದಾಖಲೆ ಮುರಿದರು.