ನವದೆಹಲಿ: ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಹರ್ಭಜನ್ ಸಿಂಗ್ ಹೊರಬಿದ್ದಿದ್ದಾರೆ.
ವೈಯಕ್ತಿಕ ಕಾರಣ ನೀಡಿದ್ದ ಸುರೇಶ್ ರೈನಾ ಅವರು ಮೊದಲೇ ವಾಪಸಾಗಿದ್ದಾರೆ. ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯಲಿದ್ದು, ಸುರೇಶ್ ರೈನಾ ವಾಪಸಾದ ನಂತರ ಹರ್ಭಜನ್ ಕೂಡ ತಾವು ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲವೆಂದು ತಿಳಿಸಿದ್ದಾರೆ.
ಚೆನ್ನೈ ತಂಡದ ಇಬ್ಬರು ಆಟಗಾರರು, ಸೇರಿದಂತೆ ತಂಡದ ಅಧಿಕಾರಿಗಳು, ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಗುಣಮುಖರಾಗುತ್ತಿದ್ದಾರೆ.