ನವದೆಹಲಿ: ವಿಶ್ವದ ಶ್ರೀಮಂತ ಮತ್ತು ವರ್ಣರಂಜಿತ ಕ್ರಿಕೆಟ್ ಟೂರ್ನಿ ಎಂದೇ ಹೇಳಲಾಗುವ ಐಪಿಎಲ್ ನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ ಭೂತ ತಲೆ ಎತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
2019ರ ಐಪಿಎಲ್ ಪಂದ್ಯ ಫಿಕ್ಸಿಂಗ್ ಮಾಡಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಸಿಬಿಐ ಬಂಧಿಸಿದೆ. ಹೈದರಾಬಾದ್ ನಲ್ಲಿ ಇಬ್ಬರು, ದೆಹಲಿಯಲ್ಲಿ ಒಬ್ಬರು ಬಂಧಿತರಾಗಿದ್ದಾರೆ. ಪಾಕಿಸ್ತಾನದಿಂದ ಬಂದ ಮಾಹಿತಿ ಆಧರಿಸಿ ಐಪಿಎಲ್ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಲು ಯತ್ನಿಸಿಸದ್ದ ಮೂವರು ಪಂಟರ್ ಗಳನ್ನು ಬಂಧಿಸಲಾಗಿದ್ದು, ಹಲವು ದಾಖಲು ವಶಕ್ಕೆ ಪಡೆಯಲಾಗಿದೆ.
ದೆಹಲಿಯ ದಿಲೀಪ್ ಕುಮಾರ್, ಹೈದರಾಬಾದ್ನ ಗುರ್ರಮ್ ವಾಸು, ಗುರ್ರಂ ಸತೀಶ್ ಸೇರಿದಂತೆ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಕೆಲವು ಸರ್ಕಾರಿ ಅಧಿಕಾರಿಗಳು ಬೆಟ್ಟಿಂಗ್ ನಲ್ಲಿ ಭಾಗಿಯಾದ ಮಾಹಿತಿ ಸಿಕ್ಕಿದ್ದು, ಪಾಕಿಸ್ತಾನದ ವಖಾಸ್ ಮಲಿಕ್ ಎಂಬವನೊಂದಿಗೆ ಸಂಪರ್ಕದಲ್ಲಿದ್ದರು. ಈ ಗುಂಪು ಬೆಟ್ಟಿಂಗ್ ನಲ್ಲಿ ಸಕ್ರಿಯವಾಗಿತ್ತು. ನಕಲಿ ದಾಖಲೆ ನೀಡಿದ ತೆರೆದ ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಲಾಗಿದೆ ಎನ್ನಲಾಗಿದೆ.