ದುಬೈ: ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಕ್ರಿಸ್ ಗೇಲ್ ಅರ್ಧದಲ್ಲಿಯೇ ಐಪಿಎಲ್ ತೊರೆದಿದ್ದಾರೆ. ಕ್ರಿಸ್ ಗೇಲ್ ಈ ಹಿಂದೆ ಆರ್ಸಿಬಿ ತಂಡ ಪ್ರತಿನಿಧಿಸಿದ್ದರು. ಬಳಿಕ ಪಂಜಾಬ್ ತಂಡ ಸೇರಿಕೊಂಡಿದ್ದ ಕ್ರಿಸ್ ಗೇಲ್ ಐಪಿಎಲ್ 14 ನೇ ಆವೃತ್ತಿಯ ಅರ್ಧದಲ್ಲೇ ನಿರ್ಗಮಿಸಿದ್ದಾರೆ.
ಕಠಿಣವಾದ ಬಯೋಬಬಲ್ ನಿಂದ ಮಾನಸಿಕ ಒತ್ತಡ ಉಂಟಾಗಿದ್ದು, ಇದರಿಂದ ಮುಕ್ತಗೊಳ್ಳಲು ಅವರು ಐಪಿಎಲ್ ಟೂರ್ನಿಯ ಉಳಿದ ಅವಧಿಯಲ್ಲಿ ಆಟವಾಡದಿರಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಅಂದಹಾಗೆ, ಕ್ರಿಸ್ ಗೇಲ್ ಕೆಲವು ತಿಂಗಳ ಹಿಂದೆ ವೆಸ್ಟ್ ಇಂಡೀಸ್ ಕ್ರಿಕೆಟ್ ನ ಬಯೋಬಲ್ ನಲ್ಲಿದ್ದರು. ಬಳಿಕ ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಜೈವಿಕ ಸುರಕ್ಷತಾ ವಲಯವನ್ನು ಸೇರಿಕೊಂಡಿದ್ದರು. ಈಗ ಐಪಿಎಲ್ ನಲ್ಲಿಯೂ ಬಯೋ ಬಬಲ್ ವಾತಾವರಣದಲ್ಲಿದ್ದಾರೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಅವರು 14 ನೇ ಆವೃತ್ತಿಯ ಐಪಿಎಲ್ ನಿಂದ ಹೊರ ನಡೆಯುವುದಾಗಿ ಹೇಳಿದ್ದಾರೆ.