ನ್ಯೂಯಾರ್ಕ್: ಯುಎಸ್ ಓಪನ್ ನಲ್ಲಿ ಎಮ್ಮಾ ರಾಡುಕಾನು ಐತಿಹಾಸಿಕ ಸಾಧನೆ ಮಾಡಿದ್ದಾರೆ. 18 ವರ್ಷಕ್ಕೆ ಅವರು ಗ್ರ್ಯಾನ್ ಸ್ಲಾಮ್ ಗೆದ್ದಿದಾರೆ.
53 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಮೊದಲ ಬ್ಟಿಟಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಎಸ್ ಮಹಿಳಾ ಸಿಂಗಲ್ಸ್ ನಲ್ಲಿ ಎಮ್ಮಾ ರಾಡುಕಾನು 6 -4, 6 -3 ನೇರ ಸೆಟ್ ಗಳಿಂದ ಕೆನಡಾದ ಲೀಲಾ ಫೆರ್ನಾಂಡೀಸ್ ವಿರುದ್ಧ ಜಯಗಳಿಸಿದ್ದಾರೆ.
18 ವರ್ಷದ ಎಮ್ಮಾ ಟೆನಿಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ವಾಲಿಫೈರ್, ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.