ನವದೆಹಲಿ: ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರು ತಾಯ್ನಾಡಿಗೆ ವಾಪಸಾಗಿದ್ದಾರೆ. ಟೋಕಿಯೋದಿಂದ ನವದೆಹಲಿಗೆ ಆಗಮಿಸಿದ್ದ ನೀರಜ್ ಚೋಪ್ರಾ, ರವಿಕುಮಾರ್ ದಹಿಯಾ, ಮೀರಾಬಾಯಿ ಚಾನು, ಪಿ.ವಿ. ಸಿಂಧು, ಲವ್ಲಿ ನಾ, ಭಜರಂಗ್ ಪೂನಿಯಾ ಹಾಗೂ ಪುರುಷರ ಹಾಕಿ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಲಾಗಿದೆ.
ಸಂಜೆ 7.30 ಕ್ಕೆ ಅಶೋಕ ಹೋಟೆಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ. ಪದಕ ಗೆದ್ದು ತವರಿಗೆ ಆಗಮಿಸಿದ ಕ್ರೀಡಾಪಟುಗಳನ್ನು ಸನ್ಮಾನಿಸಿ, ಗೌರವಿಸಲಿದ್ದಾರೆ.
ನವದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಗಿದೆ. ಭಾರತದ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭರ್ಜರಿ ಬೇಟೆಯಾಡಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಅತಿ ಹೆಚ್ಚು ಪದಕಗಳನ್ನು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗಳಿಸಿದೆ. ಒಂದು ಚಿನ್ನ ಸೇರಿದಂತೆ 7 ಪದಕಗಳನ್ನು ಭಾರತ ಗಳಿಸಿದೆ.
ನೀರಜ್ ಚೋಪ್ರಾ(ಚಿನ್ನ), ಮೀರಾಬಾಯಿ ಚಾನು(ಬೆಳ್ಳಿ), ರವಿಕುಮಾರ್ ದಹಿಯಾ(ಬೆಳ್ಳಿ), ಪಿ.ವಿ. ಸಿಂಧು(ಕಂಚು), ಭಜರಂಗ್ ಪೂನಿಯಾ(ಕಂಚು), ಲವ್ಲಿನಾ ಬೊರ್ಗೊಹೈನ್(ಕಂಚು) ಮತ್ತು ಪುರುಷರ ಹಾಕಿ ತಂಡದವರು(ಕಂಚು) ಪದಕ ಗೆದ್ದು ಬೀಗಿದ್ದಾರೆ.