
ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯಲಿದೆ. ಈಗಾಗಲೇ ತಂಡದ ಆಟಗಾರರು ಯುಎಇ ತಲುಪಿದ್ದಾರೆ. ಸದ್ಯ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಇಂದು ಎರಡು ತಂಡದ ಆಟಗಾರರ ಕ್ವಾರಂಟೈನ್ ಸಮಯ ಮುಗಿದಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ 6 ದಿನಗಳ ಕ್ವಾರಂಟೈನ್ ಮುಗಿದಿದೆ. ದುಬೈನಲ್ಲಿ ಬಿಸಿ ಹೆಚ್ಚಾಗ್ತಿದೆ. ಹಾಗಾಗಿ ತಂಡದ ಆಟಗಾರರು ಸಂಜೆ ಅಭ್ಯಾಸ ನಡೆಸುವ ಸಾಧ್ಯತೆಯಿದೆ.
ಯುಎಇಗೆ ಬರ್ತಿದ್ದಂತೆ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆದಿದೆ. ಮೊದಲ ದಿನ, ಮೂರನೇ ದಿನ ಹಾಗೂ ಆರನೇ ದಿನ ಕೊರೊನಾ ಪರೀಕ್ಷೆ ನಡೆದಿದೆ. ಆಟಗಾರರಿಗೆ ಕೊರೊನಾ ನೆಗೆಟಿವ್ ಬಂದ ಮೇಲೆ ಅವ್ರ ಕ್ವಾರಂಟೈನ್ ಸಮಯ ಮುಗಿದಿದೆ. ಆಟಗಾರರಿಗೆ ತಮ್ಮ ಕೋಣೆಯಿಂದ ಹೊರಬರಲು ಅನುಮತಿಯಿರಲಿಲ್ಲ.