ವಿರಾಟ್ ಕೊಹ್ಲಿ ಟಿ20 ಮತ್ತು ಏಕದಿನ ನಾಯಕತ್ವದಿಂದ ಕೆಳಗಿಳಿಯಲಿದ್ದು, ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ವಿರಾಟ್ ಕೊಹ್ಲಿ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿರೀಕ್ಷೆಯಂತೆ ಭಾರತದ ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳ ನಾಯಕ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಏಕದಿನ ಮತ್ತು ಟಿ20 ನಾಯಕತ್ವ ತ್ಯಜಿಸಲಿದ್ದಾರೆ.
ಟಿ20 ವಿಶ್ವಕಪ್ ನಂತರ ಕೊಹ್ಲಿ ಭಾರತದ ವೈಟ್ ಬಾಲ್ ನಾಯಕತ್ವ ತ್ಯಜಿಸಲಿದ್ದಾರೆ. ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐ ಜೊತೆಗೆ ಮಾತನಾಡಿ ವಿರಾಟ್ ಕೊಹ್ಲಿ ಅವರೇ ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ.
ಕೊಹ್ಲಿ ಪ್ರಸ್ತುತ ಎಲ್ಲಾ ಮಾದರಿ ತಂಡಗಳನನ್ಉ ಮುನ್ನಡೆಸುತ್ತಿದ್ದಾರೆ. ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದರೂ ಅವರು ರೋಹಿತ್ ಶರ್ಮಾ ರೊಂದಿಗೆ ನಾಯಕತ್ವದ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ನಿರ್ಧಾರ ಕರೆ ತೆಗೆದುಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಕೊಹ್ಲಿ ಬ್ಯಾಟಿಂಗ್ ನತ್ತ ಹೆಚ್ಚು ಗಮನಹರಿಸಲು ಬಯಸಿದ್ದಾರೆ. ಎಲ್ಲ 3 ಮಾದರಿ ತಂಡದ ನಾಯಕತ್ವ ನಿಭಾಯಿಸಲು ಕಷ್ಟಸಾಧ್ಯವಾಗಿದ್ದು, ಇದು ಅವರ ಬ್ಯಾಟಿಂಗ್ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ.
ತನ್ನ ಉದ್ದೇಶದ ಬಗ್ಗೆ ಕೊಹ್ಲಿ ಈಗಾಗಲೇ ಬಿಸಿಸಿಐ, ತಂಡದ ನಿರ್ವಹಣೆಗಾರರು ಮತ್ತು ರೋಹಿತ್ ಶರ್ಮಾ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಭಾರತ ತಂಡದ ನಾಯಕನಾಗಿ ಕೊಹ್ಲಿ ಸಾಧನೆ
ಟೆಸ್ಟ್ ಪಂದ್ಯಗಳು – 65 – ಗೆದ್ದ ಪಂದ್ಯ 38
ಏಕದಿನ ಪಂದ್ಯಗಳು – 95 – ಗೆದ್ದ ಪಂದ್ಯ 65
ಟಿ20 ಪಂದ್ಯಗಳು – 45 – ಗೆದ್ದ ಪಂದ್ಯ 29
ರೋಹಿತ್ ಶರ್ಮಾ ಆಯ್ಕೆ ಏಕೆ ?
ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಆಯ್ಕೆಯಾಗಿದ್ದು, ಅವರು ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ.
ಐಪಿಎಲ್ ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆಯ ಟಿ20 ಲೀಗ್ ಆಗಿದ್ದು, ಗರಿಷ್ಠ ಸಂಖ್ಯೆಯ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದೆ. ರೋಹಿತ್ 2013, 2015, 2017, 2019 ಮತ್ತು 2020 ರಲ್ಲಿ ಮುಂಬೈ ಇಂಡಿಯನ್ಸ್(ಎಂಐ) ಗೆಲುವಿಗೆ ಕಾರಣರಾಗಿದ್ದಾರೆ.
ಅವರು 2013 ರಲ್ಲಿ ಹರ್ಭಜನ್ ಸಿಂಗ್ ಅವರಿಂದ ನಾಯಕತ್ವ ವಹಿಸಿಕೊಂಡು ಯಶಸ್ಸು ಕಂಡಿದ್ದಾರೆ. ಈಡನ್ ಗಾರ್ಡನ್ಸ್ ನಲ್ಲಿ ನಡೆದ ಫೈನಲ್‌ನಲ್ಲಿ ಸಿಎಸ್‌ಕೆ ತಂಡವನ್ನು 23 ರನ್ಗಳಿಂದ ಸೋಲಿಸಿ ಎಂಐ ಗೆಲುವಿಗೆ ಕಾರಣರಾಗಿದ್ದರು. 2013 ರಿಂದ 2020 ರವರೆಗೆ, ರೋಹಿತ್ ಎಂಐ ತಂಡವನ್ನು 5 ಸಲ ಪ್ರಶಸ್ತಿಗೆ ಮುನ್ನಡೆಸಿದ್ದಾರೆ ಮತ್ತು 8 ಆವೃತ್ತಿಗಳಲ್ಲಿ 6 ಬಾರಿ ಪ್ಲೇಆಫ್ ಹಂತಕ್ಕೆ ಕೊಂಡೊಯ್ದಿದ್ದಾರೆ.
2018 ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಗೆಲುವು ಒಳಗೊಂಡಂತೆ ಅವರ ನಾಯಕತ್ವದಲ್ಲಿ ಭಾರತ 10 ಏಕದಿನ ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿದೆ.
ಟಿ20 ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಆಗಿ ಅವರ ದಾಖಲೆ ಇನ್ನೂ ಅತ್ಯುತ್ತಮವಾಗಿದೆ. ಭಾರತವು ರೋಹಿತ್ ನಾಯಕತ್ವದಲ್ಲಿ 19 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ಇವುಗಳಲ್ಲಿ 2018 ರಲ್ಲಿ ಶ್ರೀಲಂಕಾದಲ್ಲಿ ನಡೆದ ನಿದಹಾಸ್ ತ್ರಿಕೋನ ಸರಣಿಯ ಜಯ ಮತ್ತು 2018 ರಲ್ಲಿ ಸ್ವದೇಶದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3-0 ಸರಣಿ ಸ್ವೀಪ್ ಸೇರಿವೆ.