ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಆಡಲಿರುವ ಟೀಂ ಇಂಡಿಯಾ ನಂತ್ರ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಹೋಗ್ತಿಲ್ಲ. ಟೆಸ್ಟ್ ತಂಡದಿಂದ ಭುವನೇಶ್ವರ್ ಕುಮಾರ್ ಹೊರ ಬಿದ್ದಿದ್ದಾರೆ. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಆದ್ರೀಗ ಕಾರಣ ತಿಳಿದು ಬಂದಿದೆ.
ಭುವನೇಶ್ವರ್ ಕುಮಾರ್ ಸ್ವತಃ ಟೆಸ್ಟ್ ಕ್ರಿಕೆಟ್ ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವ ಭಾರತೀಯ ತಂಡದಲ್ಲಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ವರದಿ ಪ್ರಕಾರ, ಭುವನೇಶ್ವರ್ ಇನ್ಮುಂದೆ ದೀರ್ಘ ಸ್ವರೂಪದ ಕ್ರಿಕೆಟ್ ಆಡದಿರಲು ಬಯಸಿದ್ದಾರೆ ಎನ್ನಲಾಗಿದೆ. ಭುವನೇಶ್ವರ್ ಕುಮಾರ್ ತಮ್ಮ ಗಮನವನ್ನು ಟೆಸ್ಟ್ ಬದಲು ಸೀಮಿತ ಅವಧಿಯ ಕ್ರಿಕೆಟ್ ಕಡೆ ನೀಡಿದ್ದಾರೆ. ಇದೇ ಕಾರಣಕ್ಕೆ ಫಿಟ್ನೆಸ್ ಡ್ರಿಲ್ ಬದಲಿಸಿದ್ದಾರೆ.
ಕೆಲ ಕಾರಣಗಳಿಂದ ಅವರು ಟೆಸ್ಟ್ ಕ್ರಿಕೆಟ್ ನಿಂದ ದೂರವಿರಲು ಬಯಸಿದ್ದಾರೆಂದು ಭುವನೇಶ್ವರ್ ಆಪ್ತರು ಹೇಳಿದ್ದಾರೆ. ಭುವನೇಶ್ವರ್ ಗೆ 10 ಓವರ್ ಬೌಲಿಂಗ್ ಮಾಡಲು ಇಷ್ಟವಿಲ್ಲ ಎನ್ನಲಾಗ್ತಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾದಲ್ಲಿ ಭುವೇಶ್ವರ್ ಕುಮಾರ್ ಗೆ ಸ್ಥಾನ ನೀಡಿದ್ರೆ ಅದು ಟೀಂ ಇಂಡಿಯಾಕ್ಕೆ ಸೋಲು ಎನ್ನಬಹುದು.