ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಶುಕ್ರವಾರ ಮಹಿಳಾ ಸಿಂಗಲ್ಸ್ ನಲ್ಲಿ ಸೆರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ವಿರುದ್ಧ ಸೆಮಿಫೈನಲ್ ಪ್ರವೇಶಿಸಿದ ನಂತರ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿಯಾದರು. .
34 ವರ್ಷದ ಭಾವಿನಾ ಪಟೇಲ್ 18 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಎದುರಾಳಿಯನ್ನು 11-5 11-6 11-7 ಅಂತರದಿಂದ ಸೋಲಿಸಿದರು.
ಅವರು ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಚೀನಾದ ಜಾಂಗ್ ಮಿಯಾವೊ ಅವರನ್ನು ಎದುರಿಸುತ್ತಾರೆ. ಆದರೆ ಆಕೆಗೆ ಕನಿಷ್ಠ ಕಂಚಿನ ಪದಕವಂತೂ ಖಾತ್ರಿಯಾಗಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ನಲ್ಲಿ ಯಾವುದೇ ಕಂಚಿನ ಪದಕದ ಪ್ಲೇ-ಆಫ್ ಇಲ್ಲ, ಸೋತ ಸೆಮಿಫೈನಲಿಸ್ಟ್ ಗಳಿಗೆ ಕಂಚಿನ ಪದಕದ ಭರವಸೆ ಇದೆ.
ನಾವು ಭಾವಿನಾರಿಂದ ಪದಕವನ್ನು ನಿರೀಕ್ಷಿಸುವುದು ಖಚಿತ. ನಾಳೆ ಬೆಳಗಿನ ಪಂದ್ಯ(ಸೆಮಿಫೈನಲ್) ಅವರು ಯಾವ ಬಣ್ಣದ ಪದಕ ಗೆಲ್ಲುತ್ತಾರೆ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ ದೀಪಾ ಮಲಿಕ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ.