ಟಿ20 ವಿಶ್ವಕಪ್ ನಲ್ಲಿ ಗಮನಸೆಳೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಇಂದಿನ ಪಂದ್ಯದಲ್ಲಿ ಬೆಟ್ಟಿಂಗ್ ಜೋರಾಗಿದೆ.
ಇದೊಂದು ಪಂದ್ಯ ಎನ್ನುವುದಕ್ಕಿಂತ ಮುಖ್ಯವಾಗಿ ಉಭಯ ದೇಶಗಳ ನಡುವಿನ ಸಮರ ಎಂದೇ ಹೆಚ್ಚಿನವರು ಭಾವಿಸುತ್ತಾರೆ. ಇಂತಹ ಪಂದ್ಯದಲ್ಲಿ ಬೆಟ್ಟಿಂಗ್ ಜೋರಾಗಿದೆ. ಆನ್ ಲೈನ್ ಮೂಲಕವು ಬೆಟ್ಟಿಂಗ್ ದಂಧೆ ನಡೆದಿದೆ ಎಂದು ಹೇಳಲಾಗಿದೆ.
ಇಂತಹುದೊಂದು ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿದ್ದ ಬೆಟ್ಟಿಂಗ್ ದಂಧೆಕೋರರು ವಿವಿಧ ರೂಪದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರ, ಗ್ರಾಮಾಂತರ ಪ್ರದೇಶಗಳಲ್ಲಿಯೂ ದಂಧೆ ಜೋರಾಗಿದೆ. ಕೂಲಿ ಕಾರ್ಮಿಕರು. ಉದ್ಯಮಿಗಳು. ಸಣ್ಣ ವ್ಯಾಪಾರಿಗಳು. ಯುವಕರು, ವಿದ್ಯಾರ್ಥಿಗಳು ಕೆಲವೆಡೆ ಬೆಟ್ಟಿಂಗ್ ದಂಧೆಯ ಹಿಂದೆ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ವ್ಯವಸ್ಥಿತವಾಗಿ ನಡೆಸಲು ಮುಂದಾಗಿದ್ದಾರೆ.
ಈ ಮಾಹಿತಿ ಅರಿತಿರುವ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ದಂಧೆಕೋರರ ಮಾಹಿತಿ ಕಲೆಹಾಕಿ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವ ತಂಡ ಗೆಲ್ಲಲಿದೆ ಎನ್ನುವುದರಿಂದ ಹಿಡಿದು ಪ್ರತಿ ಓವರ್ ಮತ್ತು ಪ್ರತಿ ಬಾಲ್ ಹಾಗೂ ಆಟಗಾರರು ಗಳಿಸುವ ರನ್ ಮತ್ತು ವಿಕೆಟ್ ಗಳ ಲೆಕ್ಕಚಾರದಲ್ಲಿ ಹಣ ಮಾತ್ರವಲ್ಲದೆ ವಾಹನ, ನಿವೇಶನ, ವಸ್ತುಗಳನ್ನು ಕೂಡ ಪಣವಾಗಿಲಾಗುತ್ತದೆ ಎನ್ನಲಾಗಿದೆ.