ಫೂಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಹ ಬಹಳಷ್ಟು ಅಭಿಮಾನಿಗಳು ಮೆಸ್ಸಿಗೆ ಇದ್ದಾರೆ. ಬಿಯರ್ ಕಂಪನಿ ಬಡ್ವೈಸರ್ ತನ್ನ ಬ್ರಾಂಡ್ ಜಾಹೀರಾತು ಮಾಡಲೆಂದು ಮೆಸ್ಸಿ ಅವರ ಗೀಚುಚಿತ್ರಗಳನ್ನು ದೆಹಲಿಯ ಹೌಜ್ ಖಾಸ್ ಗ್ರಾಮದ ಬಳಿ ಸ್ಥಾಪಿಸಿದೆ.
ಆದರೆ ಇದು ವಿವಾದಕ್ಕೆ ಈಡಾಗಿದೆ. ಅಭಿಯಾನವೊಂದರ ಹೆಸರಿನಲ್ಲಿ ಬಡ್ವೈಸರ್ ಈ ಜಾಗದಲ್ಲಿ ಸ್ಥಳೀಯ ಕಲಾವಿದರು ರಚಿಸಿದ್ದ ಚಿತ್ರಗಳ ಮೇಲೆಯೇ ಈ ಗೀಚುಚಿತ್ರಗಳನ್ನು ಹಾಕಲಾಗಿದೆ ಎಂದು ಸ್ಟಾರ್ಟ್ ಇಂಡಿಯಾ ಪ್ರತಿಷ್ಠಾನದ ಸ್ಥಳೀಯ ಕಲಾವಿದರ ಗುಂಪೊಂದು ಸಾಮಾಜಿಕ ಜಾಲತಾಣದಲ್ಲಿ ದನಿಯೇರಿಸಿದ್ದಾರೆ.
2014ರಲ್ಲಿ ಕಲಾವಿದರಾದ ಒಕುಡಾ ಸ್ಯಾನ್ ಮಿಗುವೆಲ್ ಹಾಗೂ ಮೌರಿಸ್ ವರಾಸ್ ಅವರು ರಚಿಸಿದ್ದ ಕಲಾಕೃತಿಗಳ ಮೇಲೆಯೇ ಈ ಹೊಸ ಗೀಚುಚಿತ್ರಗಳ ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ಸ್ಥಳೀಯ ಕಲಾವಿದರ ಸಂಘ ಆಪಾದನೆ ಮಾಡುತ್ತಿದೆ.
ಜಗತ್ತಿನ ಅತಿ ಉದ್ದದ ಹಾಲು ಹಲ್ಲು ಹೊಂದಿದ್ದ 10 ರ ಪೋರ
ಶ್ರೇಷ್ಠ ಫುಟ್ಬಾಲಿಗರೊಬ್ಬರ ಜೀವನಚರಿತ್ರೆಯನ್ನು ಆಚರಿಸುವ ತನ್ನ ಅಭಿಯಾನದ ಭಾಗವಾಗಿ ಈ ಗೀಚುಚಿತ್ರಗಳನ್ನು ಹಾಕಲಾಗಿದ್ದು, ಇದಕ್ಕಾಗಿ ಸ್ಟಾರ್ಟ್ ಇಂಡಿಯಾ ಸೇರಿದಂತೆ ಸ್ಥಳೀಯ ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮೆಸ್ಸಿರ ಗೀಚುಚಿತ್ರಗಳನ್ನು ಏರಿಸಲಾಗಿದೆ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮೆಸ್ಸಿ ಅವರ ಜನ್ಮಸ್ಥಳ, ಅವರ ಬಾಲ್ಯ ಹಾಗೂ ಫುಟ್ಬಾಲ್‌ನಲ್ಲಿ ಅವರು ಸಾಗಿ ಬಂದ ಹಾದಿಯನ್ನು ತಿಳಿಸುವ ಈ ಗೀಚುಚಿತ್ರಗಳ ಅಭಿಯಾನವನ್ನು ಮುಂಬಯಿ ಹಾಗೂ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಡ್ವೈಸರ್ ತಿಳಿಸಿದೆ.
https://www.instagram.com/p/CNNUFKQFMW1/?utm_source=ig_web_copy_link