ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ದೇಶದ ನೆರವಿಗೆ ಬಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಮ್ಲಜನಕದ 2000 ಕಾನ್ಸಂಟ್ರೇಟರ್‌ಗಳನ್ನು ದೇಣಿಗೆ ಕೊಡಲು ಮುಂದಾಗಿದೆ.
“ವೈರಸ್ ವಿರುದ್ಧದ ಈ ಸಂಘಟಿತ ಹೋರಾಟದಲ್ಲಿ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕಿದೆ. ಸಂಕಷ್ಟದ ಈ ಅವಧಿಯಲ್ಲಿ ವೈದ್ಯಕೀಯ ಸಲಕರಣೆಗಳ ತುರ್ತು ಅಗತ್ಯವೇನೆಂಬುದನ್ನು ಅರಿತ ಬಿಸಿಸಿಐ ದೇಶಾದ್ಯಂತ ಇರುವ ಬೇಡಿಕೆ-ಪೂರೈಕೆ ನಡುವೆ ಇರುವ ಅಂತರ ತಗ್ಗಿಸಲು ನೆರವಾಗಲಿದೆ. ಲಸಿಕಾ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸೋಂಕಿನ ವ್ಯಾಪಕತೆಯನ್ನು ಮೆಟ್ಟಿ ನಿಲ್ಲೋಣ” ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ತಿಳಿಸಿದ್ದಾರೆ.
ಮರಗಳ ನಡುವೆ ಸಿಲುಕಿಕೊಂಡ ಕುದುರೆ ರಕ್ಷಣೆ
ಕಳೆದ ವರ್ಷ ಕೋವಿಡ್ ಸಾಂಕ್ರಮಿಕದ ಮೊದಲ ಅಲೆ ದೇಶವನ್ನು ತಲ್ಲಣಗೊಳಿಸಿದ್ದ ವೇಳೆ ಬಿಸಿಸಿಐ 51 ಕೋಟಿ ರೂ.ಗಳ ದೇಣಿಗೆಯನ್ನು ಪಿಎಂ-ಕೇರ್ಸ್ ನಿಧಿಗೆ ನೀಡಿತ್ತು.
ಬೊಂಬೆಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ 10 ಲಕ್ಷ ಖರ್ಚು ಮಾಡಿದ ಯುವಕ
ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಮಡದಿ ಅನುಷ್ಕಾ ಶರ್ಮಾ ನಿಧಿ ಸಂಗ್ರಹಣೆ ಮೂಲಕ 2 ಕೋಟಿ ರೂ.ಗಳ ದೇಣಿಗೆ ನೀಡಿದರೆ, ಅವರ ಈ ಪರಿಶ್ರಮದಿಂದ ಒಟ್ಟಾರೆ 11 ಕೋಟಿ ರೂ.ಗಳು ಒಂದೇ ವಾರದಲ್ಲಿ ಸಂಗ್ರಹವಾಗಿದೆ. ಇದೇ ವೇಳೆ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ರಿಶಭ್ ಪಂತ್, ಪಾಂಡ್ಯಾ ಸಹೋದರರು ಮತ್ತು ಅಜಿಂಕ್ಯಾ ರಹಾನೆ ಅವರೆಲ್ಲಾ ಮುಂದೆ ಬಂದು ವೈರಸ್ ವಿರುದ್ಧದ ದೇಶದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.