ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ. ವಿಶ್ವಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲೂ ಬಿಸಿಸಿಐ ಯುಎಇಯಲ್ಲಿ ಐಪಿಎಲ್ ಆಯೋಜನೆ ಮಾಡಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐ ಸಾಕಷ್ಟು ಖರ್ಚು ಮಾಡ್ತಿದೆ. ಐಪಿಎಲ್ ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿರುವ ಬಿಸಿಸಿಐ ದೇಶದಲ್ಲಿ ಕಾಸ್ಟ್ ಕಟ್ಟಿಂಗ್ ಶುರು ಮಾಡಿದೆ.
ಎನ್‌ಸಿಎದಲ್ಲಿ 11 ಕೋಚ್ ಗಳ ಒಪ್ಪಂದವನ್ನು ವಿಸ್ತರಿಸುವ ನಿರ್ಧಾರದಿಂದ ಹಿಂದೆ ಸರಿದಿದೆ. ಕೊರೊನಾದ ನಂತರ, ಬಿಸಿಸಿಐ ಮೊದಲ ಬಾರಿಗೆ ಕಡಿತದ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. 11 ಎನ್‌ಸಿಎ ತರಬೇತುದಾರರ ವಾರ್ಷಿಕ ಒಪ್ಪಂದವನ್ನು ವಿಸ್ತರಿಸುವುದಿಲ್ಲವೆಂದಿದೆ. ಎನ್‌ಸಿಎ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿರುವ ರಾಹುಲ್ ದ್ರಾವಿಡ್ ಈ ಬಗ್ಗೆ ಕಳೆದ ವಾರ ಮಾಹಿತಿ ನೀಡಿದ್ದರು. ಈ ಎಲ್ಲರ ವೇತನ ಸೇರಿದಂತೆ ಬಿಸಿಸಿಐಗೆ ಒಟ್ಟು 30-55 ಲಕ್ಷ ರೂಪಾಯಿ ಖರ್ಚು ಬರುತ್ತದೆ.
ಕೆಲ ತರಬೇತುದಾರರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವಂತೆ. ಎರಡು ದಿನಗಳ ಹಿಂದೆ ಕರೆ ಮಾಡಿದ್ದ ದ್ರಾವಿಡ್, ಒಪ್ಪಂದ ಮುಂದುವರೆಸುವುದಿಲ್ಲವೆಂದಿದ್ದರಂತೆ. ಕೊರೊನಾ ವೈರಸ್‌ನಿಂದಾಗಿ ಮಾರ್ಚ್ ತಿಂಗಳಿನಿಂದ ಎನ್‌ಸಿಎ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತ್ತು. ಕಳೆದ ತಿಂಗಳು ಬಿಸಿಸಿಐನ ವಾರ್ಷಿಕ ಗುತ್ತಿಗೆ ಆಟಗಾರರು ಅಭ್ಯಾಸಕ್ಕಾಗಿ ಎನ್‌ಸಿಎಗೆ ಬಂದಿದ್ದರು.