ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬ ಆಟಗಾರನು ಯೋ ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗುತ್ತದೆ.
ಯೋ ಯೋ ಟೆಸ್ಟ್ ನಂತ್ರ ತಂಡದ ಆಟಗಾರರ ಫಿಟ್ನೆಸ್ ಅತ್ಯುತ್ತಮವಾಗಿದೆ. ಇದು ಆಟದಲ್ಲಿ ಸ್ಪಷ್ಟವಾಗಿ ಕಾಣ್ತಿದೆ. ಈ ಮಧ್ಯೆ ಬಿಸಿಸಿಐ ‘ಟೈಮ್ ಟ್ರಯಲ್ ಟೆಸ್ಟ್’ ಎಂಬ ಹೊಸ ಫಿಟ್ನೆಸ್ ಪರೀಕ್ಷೆಗೆ ಮುಂದಾಗಿದೆ. ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಯೋ ಯೋ ಜೊತೆಗೆ ಈ ಪರೀಕ್ಷೆಯಲ್ಲಿ ಪಾಸ್ ಆಗ್ಬೇಕು.
‘ಟೈಮ್ ಟ್ರಯಲ್ ಟೆಸ್ಟ್’ನಲ್ಲಿ ಆಟಗಾರರ ವೇಗ ಮತ್ತು ಸಹಿಷ್ಣುತೆಯನ್ನು ಪರಿಶೀಲಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಆಟಗಾರರು 2 ಕಿಲೋಮೀಟರ್ ದೂರವನ್ನು ಕ್ರಮಿಸಬೇಕಾಗುತ್ತದೆ. ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಪ್ರಕಾರ, ವೇಗದ ಬೌಲರ್ ಈ ಪರೀಕ್ಷೆಯನ್ನು 8 ನಿಮಿಷ 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಬ್ಯಾಟ್ಸ್ ಮನ್‌ಗಳು, ಸ್ಪಿನ್ ಬೌಲರ್ ಮತ್ತು ವಿಕೆಟ್‌ಕೀಪರ್ ಈ ಪರೀಕ್ಷೆಯನ್ನು 8 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ.
ಟೈಮ್ ಟ್ರಯಲ್ ಟೆಸ್ಟ್ ನಂತ್ರ ಯೋ ಯೋ ಪರೀಕ್ಷೆ ರದ್ದಾಗುತ್ತಿಲ್ಲ. ಟೀಂ ಇಂಡಿಯಾಕ್ಕೆ ಸೇರಲು ಆಟಗಾರರು ಈ ಎರಡೂ ಪರೀಕ್ಷೆಯನ್ನು ಪಾಸ್ ಆಗ್ಬೇಕು. ಫಿಟ್ನೆಸ್ ಹೆಚ್ಚಿಸಲು ಈ ಪರೀಕ್ಷೆ ದೊಡ್ಡ ಪಾತ್ರ ವಹಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಈ ಪರೀಕ್ಷೆಯನ್ನು ಫೆಬ್ರವರಿ, ಜೂನ್ ಮತ್ತು ಆಗಸ್ಟ್ ನಲ್ಲಿ ಮಾಡಲಾಗುತ್ತದೆ.