ಬಿಸಿಸಿಐ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಘೋಷಿಸಿದೆ. ಬುಧವಾರ ಬಿಸಿಸಿಐ 18 ಆಟಗಾರರ ತಂಡದ ಘೋಷಣೆ ಮಾಡಿದೆ. ವಿಜಯ್ ಹಜಾರೆ ಟ್ರೋಫಿಗಾಗಿ ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವ್ರನ್ನು ತಂಡದಿಂದ ಕೈಬಿಡಲಾಗಿದೆ. ಟೀಂ ಇಂಡಿಯಾಕ್ಕೆ ವೇಗದ ಬೌಲರ್ ಉಮೇಶ್ ಯಾದವ್ ಮರಳಿದ್ದಾರೆ.
ಉಮೇಶ್ ಯಾದವ್ ಗೆ ಫಿಟ್ನೆಸ್ ಪರೀಕ್ಷೆ ನಡೆಯಲಿದೆ. ಅದ್ರ ನಂತ್ರವೇ ಅವ್ರು ಅಹಮದಾಬಾದ್ ನಲ್ಲಿ ತಂಡ ಸೇರಲಿದ್ದಾರೆ. ಭಾರತ-ಇಂಗ್ಲೆಂಡ್ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯಗಳು ಅಹಮದಾಬಾದ್ ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 24ರಿಂದ 28ರವರೆಗೆ ನಡೆಯಲಿದೆ. ಪಂದ್ಯ ಹಗಲು-ರಾತ್ರಿ ನಡೆಯಲಿದೆ. ನಾಲ್ಕನೇ ಹಾಗೂ ಕೊನೆ ಪಂದ್ಯ ಮಾರ್ಚ್ 4ರಿಂದ 8ರವರೆಗೆ ನಡೆಯಲಿದೆ.
ನಾಳೆ ನಡೆಯಲಿದೆ IPL ಹರಾಜು: ಯಾವ ಆಟಗಾರರಿಗೆ ಎಷ್ಟೆಷ್ಟು ಬೆಲೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಅಂಕ ಗಳಿಸಿವೆ. ಮೊದಲ ಎರಡು ಪಂದ್ಯಗಳು ಚೆನ್ನೈನಲ್ಲಿ ನಡೆದಿದೆ. ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊ. ಸಿರಾಜ್ ಭಾರತ ಟೆಸ್ಟ್ ತಂಡದಲ್ಲಿರಲಿದ್ದಾರೆ.