ಢಾಕಾ: ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. 5 ರನ್ ಗಳಿಂದ ಬಾಂಗ್ಲಾದೇಶ ಎರಡನೇ ಪಂದ್ಯವನ್ನು ಗೆಲ್ಲುವುದರೊಂದಿಗೆ ಏಕದಿನ ಸರಣಿ ವಶಕ್ಕೆ ಪಡೆದುಕೊಂಡಿದೆ.
ಢಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.
ಅನ್ಮುಲ್ ಹಕ್ 11, ನಜ್ಮಲ್ ಹುಸೇನ್ 21, ಮುಷಿಕುರ್ ರಹೀಂ 12, ಮಹಮ್ಮದ್ ವುಲ್ಲಾ 77, ಮೆಹದಿ ಹಸನ್ ಅಜೇಯ 100, ನಾಸಮ್ ಅಹಮದ್ ಅಜೇಯ 18 ರನ್ ಗಳಿಸಿದರು. ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ 3, ಉಮ್ರಾನ್ ಮಲ್ಲಿಕ್ 2, ಮಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ ಪರವಾಗಿ ವಿರಾಟ್ ಕೊಹ್ಲಿ 5, ಶಿಖರ್ ಧವನ್ 8, ಶ್ರೇಯಸ್ ಅಯ್ಯರ್ 82, ವಾಷಿಂಗ್ಟನ್ ಸುಂದರ್ 11, ಕೆಎಲ್ ರಾಹುಲ್ 14. ಅಕ್ಷರ್ ಪಟೇಲ್ 56, ಶಾರ್ದುಲ್ ಠಾಕೂರ್ 7, ದೀಪಕ್ ಚಾಹರ್ 11, ರೋಹಿತ್ ಶರ್ಮಾ ಅಜೇಯ 51 ಮಹಮ್ಮದ್ ಸಿರಾಜ್ 2, ಉಮ್ರಾನ್ ಮಲಿಕ್ ಅಜೇಯ 0 ರನ್ ಗಳಿಸಿದರು
ಬಾಂಗ್ಲಾ ಪರವಾಗಿ ಮೆಹದಿ ಹಸನ್ 2, ಎಬಡೊಟ್ ಹುಸೇನ್ 3, ಶಕೀಬ್ ಹಲ್ ಹಸನ್ 2, ಮುಸ್ತಫಿಜುರ್ ರೆಹಮಾನ್ 1, ಮೊಹಮ್ಮದ್ ವುಲ್ಲಾ 1 ವಿಕೆಟ್ ಪಡೆದರು. ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು.