ಗುವಾಹಟಿ: ಮ್ಯಾಕ್ಸ್ವೆಲ್ ಭರ್ಜರಿ ಶತಕದ ನೆರವಿನಿಂದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 223 ರನ್ ಗುರಿ ಬೆನ್ನತ್ತಿ ಜಯಗಳಿಸಿದೆ.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್ವೆಲ್ 48 ಎಸೆತಗಳಲ್ಲಿ ಅಜೇಯ ಶತಕ(104) ಸಿಡಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಋತುರಾಜ್ ಗಾಯಕ್ ವಾರ್ಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 5 ವಿಕೆಟ್ ಗೆ 225 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಭಾರತದ ಪರ ಋತುರಾಜ್ ಗಾಯಕ್ವಾಡ್ ಅಜೇಯ 123, ಸೂರ್ಯಕುಮಾರ್ 39, ತಿಲಕ್ ವರ್ಮ ಅಜೇಯ 31 ರನ್ ಗಳಿಸಿದರು. ಕೇನ್ ರಿಚರ್ಡ್ ಸನ್, ಜೇಸನ್ ಬೆಹ್ರನ್ ಡ್ರೂಫ್, ಆರನ್ ಹಾರ್ಡ್ಲಿ ತಲಾ ಒಂದು ವಿಕೆಟ್ ಪಡೆದರು.
ಆಸೀಸ್ ಪರ ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 104, ಟ್ರಾವಿಸ್ ಹೆಡ್ 35, ಮ್ಯಾಥ್ಯೂ ವೇಡ್ ಅಜೇಯ 28 ರನ್ ಗಳಿಸಿದ್ದಾರೆ. ರವಿ ಬಿಷ್ಣೋಯಿ 2, ಆರ್ಶ್ ದೀಪ್, ಅವೇಶ್ ಖಾನ್, ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಮ್ಯಾಕ್ಸ್ ವೆಲ್ ಗೆ ಅಂತರಾಷ್ಟ್ರೀಯ ಟಿ20 ಯಲ್ಲಿ ಇದು ನಾಲ್ಕನೇ ಶತಕವಾಗಿದೆ. 5 ಪಂದ್ಯಗಳ ಸರಣಿ ಕ್ಲೀನ್ ಸ್ವೀಪ್ ಮಾಡುವ ಭಾರತದ ಆಸೆಗೆ ಪೆಟ್ಟು ಬಿದ್ದಿದೆ. ಭಾರತ 2-1 ಅಂತರದಿಂದ ಮುಂದಿದೆ. ಆಸೀಸ್ ಗೆ ಸರಣಿ ಜಯದ ಆಸೆ ಜೀವಂತವಾಗಿದೆ.