ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿದೆ.
ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಆಸ್ಟ್ರೇಲಿಯಾ 3 ವಿಕೆಟ್ ಗಳಿಂದ ರೋಚಕ ಜಯಗಳಿಸಿದೆ.
ಎರಡನೇ ಸೆಮಿಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಕುಸಿತದಿಂದಾಗಿ 49.4 ಓವರ್ ಗಳಲ್ಲಿ 212 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಡೇವಿಡ್ ಮಿಲ್ಲರ್ 101, ಹೆನ್ರಿಚ್ ಕ್ಲಾಸೆನ್ 47, ಜೆರಾಲ್ಡ್ ಕೊಫೀಜ್ 19 ರನ್ ಗಳಿಸಿದರು. ಆಸ್ಟ್ರೇಲಿಯಾ ಪರವಾಗಿ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 3, ಜೋಶ್ ಹೆಜಲ್ ವುಡ್ 2, ಟ್ರಾವಿಸ್ ಹೆಡ್ 2 ವಿಕೆಟ್ ಪಡೆದರು.
ಸುಲಭದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಗೆಲುವು ಕಂಡಿದೆ
ಆಸೀಸ್ ಪರ ಟ್ರಾವಿಸ್ ಹೆಡ್ 62, ಡೇವಿಡ್ ವಾರ್ನರ್ 29, ಮಿಚಲ್ ಮಾರ್ಷ್ 0, ಸ್ಟೀವನ್ ಸ್ಮಿತ್ 30, ಮಾರ್ಕಸ್ ಲೆಬುಸೆಂಗೆ 18, ಗ್ಲೆನ್ ಮ್ಯಾಕ್ಸ್ ವೆಲ್ 1, ಜೋಸ್ ಇಂಗ್ಲಿಸ್ 28, ಮಿಚೆಲ್ ಸ್ಟಾರ್ಕ್ ಅಜೇಯ 16, ಪ್ಯಾಟ್ ಕಮಿನ್ಸ್ ಅಜೇಯ 14 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಕಾಗಿಸೊ ರಬಾಡ 1, ಏಡನ್ ಮ್ಯಾಕ್ರಮ್ 1, ಕೇಶವ ಮಹಾರಾಜ್ 1, ತಬ್ರೇಜ್ ಶಮಿ 2, ಜೆರಾಲ್ಡ್ ಕೊಫ್ಟ್ಜಿ 2 ವಿಕೆಟ್ ಪಡೆದರು. ಅಂತಿಮವಾಗಿ ಆಸ್ಟ್ರೇಲಿಯಾ 47.2 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ನ. 19 ರಂದು ಅಹಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಭಾರತ –ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.