ಟೀಂ ಇಂಡಿಯಾ ವೇಗಿ ಮಹಮ್ಮದ್ ಶಮಿ ಟೆಸ್ಟ್ ಪಂದ್ಯದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದು ಅವರನ್ನ ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಟೀಂ ಇಂಡಿಯಾ ಶನಿವಾರ ನಡೆದ 2ನೇ ಇನ್ನಿಂಗ್ಸ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆತದಿಂದಾಗಿ ಶಮಿ ಮಣಿಕಟ್ಟು ನೋವಿಗೆ ಒಳಗಾದ್ರು. ತುಂಬಾ ನೋವಿನಿಂದ ಬಳಲುತ್ತಿದ್ದ ಶಮಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಸಂಜೆಯೊಳಗಾಗಿ ಮಾಹಿತಿ ತಿಳಿಯಲಿದೆ ಎಂದು ಟೀಂ ಇಂಡಿಯಾ ನಾಯಕ ಕೊಹ್ಲಿ ಹೇಳಿದ್ದಾರೆ.
ಶಮಿ ಮಣಿಕಟ್ಟು ಏಟಿಗೆ ಗುರಿಯಾಗ್ತಿದ್ದಂತೆಯೇ ವೈದ್ಯಕೀಯ ಸಿಬ್ಬಂದಿ ಶಮಿ ನೆರವಿಗೆ ಧಾವಿಸಿದ್ರು. ಸ್ವಲ್ಪ ಚರ್ಚೆ ನಡೆಸಿದ ಬಳಿಕ ಶಮಿ 21.2 ಓವರ್ಗಳಲ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಲು ನಿರ್ಧರಿಸಿದ್ರು . ಶಮಿಗೆ ಪೇನ್ ಕಿಲ್ಲರ್ಗಳನ್ನ ಲೇಪಿಸಲಾಯಿತಾದರೂ ಶಮಿಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಈಗ 0-1 ಅಂತರದಿಂದ ಹಿನ್ನಡೆ ಪಡೆದುಕೊಂಡಿದೆ.